ಮೂಡಿಗೆರೆ : 2016-17ನೇ ಸಾಲಿನ ಎಸ್ ಎಸ್ ಎಲ್ ಸಿಯಲ್ಲಿ ಶೇಕಡ 85{530ccd75e2fcec17e1c04cab1dd604116093241ff584d1c1efdf19a8030d127f}ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾಥ್ಯಿಗಳಿಗೆ ಮೂಡಿಗೆರೆಯ ನಳಂದಾ ಶಾಲೆಯಲ್ಲಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದೇ ವೇಳೆ, 625ಕ್ಕೆ 617 ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದ ಅನ್ವಿತಾಗೌಡ ಎಂ ರವರಿಗೆ ಶಾಲೆಯ ಕಾರ್ಯದರ್ಶಿಗಳಾದ ಸಾವಿತ್ರಿ ಚಿನ್ನದ ಪದಕ ನೀಡಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಉಳಿದ 17 ವಿದ್ಯಾರ್ಥಿಗಳಿಗೂ ಶೀಲ್ಡ್ ನೀಡುವ ಮೂಲಕ ಅಭಿನಂದಿಸಿದರು.
ಕಾರ್ಯಕ್ರಮವನ್ನ ಉದ್ಘಾಟಿಸಿದ ಪತ್ರಕರ್ತರು ಹಾಗೂ ನಳಂದ ಶಾಲೆಯ
ಹಳೇ ವಿದ್ಯಾರ್ಥಿ ರಾಘವೇಂದ್ರ ಕೆಸವಳಲುರವರು ಮಾತನಾಡಿ, ಪ್ರಪಂಚದಲ್ಲಿ ಸ್ವಾರ್ಥ ಇಲ್ಲದೇ ಕೆಲಸ ಮಾಡುವವರು ಎಂದರೆ ಅದು ಶಿಕ್ಷಕರು ಹಾಗೂ ಶಿಕ್ಷಕಿಯರು ಮಾತ್ರ ಎಂದರು. ಗುರುಗಳಿಗೆ ಗೌರವ ಕೊಡೋದ್ರ ಜೊತೆ ಅಂದಿನ ಪಾಠವನ್ನ ಅಂದೇ ಓದುವುದರಿಂದ ಉತ್ತಮ ಅಂಕ ಗಳಿಸಬಹುದು ಎಂದರು. ಎಲ್ಲವನ್ನೂ ಶಿಕ್ಷಕರೇ ಮಾಡಿ ಎಂದರೆ ಸಾಧ್ಯವಾಗುವುದಿಲ್ಲ. ಶಿಕ್ಷಕರ ಜೊತೆ ಪೋಷಕರು ಕೈ ಜೋಡಿಸಿದ್ದೇ ಆದಲ್ಲಿ ಸಮಾಜಕ್ಕೆ ಓರ್ವ ಉತ್ತಮ ಪ್ರಜೆಯನ್ನು ಸೃಷ್ಟಿಸಬಹುದು ಎಂದರು.
ನಳಂದ ಶಾಲೆಯ ಮುಖ್ಯೋಪಾಧ್ಯರಾದ ವಿ.ಬಿ. ಕನ್ನಿಂಗ್ ಹಾಲ್ ಮಾತನಾಡಿ, ಯುಗ ಯುಗಗಳಿಂದ ಸಾಗಿ ಬಂದ ಗುರು ಶಿಷ್ಯರ ಬಾಂಧವ್ಯವನ್ನ ಎಳೆ-ಎಳೆಯಾಗಿ ಬಿಚ್ಚಿಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಕಾರ್ಯದರ್ಶಿ ಸಾವಿತ್ರಿ ವಿಧ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಅಭಿನಂದನೆ ಸಲ್ಲಿಸಿದರು. ನಳಂದ ಶಾಲೆ 1981ರಲ್ಲಿ ಪ್ರಾರಂಭವಾಗಿದ್ದು. ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಕಾರಣವಾದ ಎಲ್ಲಾ ಹಳೆ ವಿದ್ಯಾರ್ಥಿಗಳಿಗೆ ನಾನು ಚಿರಋಣಿ ಹಾಗೂ ಮುಂದಿನ ದಿನಗಳಲ್ಲಿ ಪಿ ಯು ಕಾಲೇಜ್ ಪ್ರಾರಂಭಿಸೋದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯೊಪಾಧ್ಯಾಯಿನಿ ಅಸ್ಮತ್ ಇರ್ಫಾನ ಹಾಗೂ ಶಿಕ್ಷಕರಾದ ಗಾಯಿತ್ರಿ, ಸುರೇಶ್ ಉಪಸ್ಥಿತರಿದ್ದರು. ಡಾಲಿ ಗಣೇಶ್ ನಿರೂಪಣೆ ಮಾಡಿದ್ರೆ, ಶಿಕ್ಷಕಿ ಪಂಚಮಿ ವಂದಿಸಿದರು.