ಬೆಂಗಳೂರು : ಸೇವಾ ಹಿರಿತನದ ಆಧಾರದ ಮೇಲೆ ಹಿರಿಯ ಐಪಿಎಸ್ ಅಧಿಕಾರಿ ನೀಲಮಣಿ ರಾಜು ಕರ್ನಾಟಕ ರಾಜ್ಯದ ನೂತನ ಡಿಜಿ-ಐಜಿಪಿಯಾಗಿ ನೇಮಕವಾಗಿದ್ದಾರೆ. ಕರ್ನಾಟಕ ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿ ಎಂಬ ಶ್ರೇಯಕ್ಕೂ ನೀಲಮಣಿ ರಾಜು ಪಾತ್ರರಾಗಿದ್ದಾರೆ.
ನೀಲಮಣಿ ರಾಜು ಬಗ್ಗೆ ನಿಮಗೆ ಗೊತ್ತಿರದ 5 ಅಂಶಗಳು:
- ನೀಲಮಣಿ ಜನವರಿ 17, 1960ರಲ್ಲಿ ಜನಿಸಿದ್ದು, ಉತ್ತರಾಖಂಡ್’ನ ಹರಿದ್ವಾರ ಜಿಲ್ಲೆಯ ರೂರ್ಕಿಯವರು.
- ನೀಲಮಣಿ ಕೆಜಿಎಫ್’ನಲ್ಲಿ ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಆ ಬಳಿಕ ಕೋಲಾರ ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
- ಕೇಂದ್ರ ಗುಪ್ತಚರ ಇಲಾಖೆಯಲ್ಲಿ ಜಂಟಿ ನಿರ್ದೇಶಕಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
- ನೀಲಮಣಿ M.A, MBA, M.Phil ಪದವಿ ಪಡೆದಿದ್ದಾರೆ.
- ನೀಲಮಣಿಯವರ ಪತಿ ಎನ್. ನರಸಿಂಹ ರಾಜು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಮೂರು ವರ್ಷಗಳ ಕಾಲ ಪ್ರದಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.