ನಾನು ಸಂಸಾರಿ ನನಗೆ ಅನೈತಿಕ ಸಂಬಂಧವಿಲ್ಲ : ಸ್ಪೀಕರ್ ರಮೇಶ್ ಕುಮಾರ್…

177
firstsuddi

ಕೋಲಾರ: ಸ್ಪೀಕರ್ ರಮೇಶ್ ಕುಮಾರ್ ಅವರು ಸಂಸದ ಕೆ.ಎಚ್. ಮುನಿಯಪ್ಪ ಅವರ ವಿರುದ್ಧ ತಮ್ಮ ಹಾಸ್ಯದ ಮಾತಿನಲ್ಲೇ ವ್ಯಂಗ್ಯವಾಡಿದ್ದು, ನಾನು ಯಾರ ಪರವೂ ಅಲ್ಲ ಯಾರ ವಿರೋಧವು ಅಲ್ಲ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಹೈ ಕಮಾಂಡ್ ನಿರ್ಧಾರ ತೆಗೆದುಕೊಳ್ಳತ್ತದೆ. ಮುನಿಯಪ್ಪ ಅವರಿಗೆ ನನ್ನ ಜೊತೆ ಮಲಗಲು ಇಷ್ಟವಿರಬಹುದು ಆದರೆ ನನಗೆ ಸಂಸಾರವಿದೆ ನನಗೆ ಅನೈತಿಕ ಸಂಬಂಧವಿಲ್ಲ ನಾನು ಸಪ್ತಪದಿ ತುಳಿದಿರುವ ನನ್ನ ಹೆಂಡತಿಯೊಂದಿಗೆ ಮಾತ್ರ ಸಂಸಾರ ನಡೆಸುವೆ ಎಂದು ಹಾಸ್ಯವಾಗಿ ಮುನಿಯಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.