‘ಐ ಲವ್‌ ಯು ‘ಸಿನಿಮಾದ  ಆಡಿಯೋ ರಿಲೀಸ್ ಕಾರ್ಯಕ್ರಮ ಮುಂದೂಡಿಕೆ…

403
firstsuddi

ಬೆಂಗಳೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ  ಅನಾರೋಗ್ಯ ಹಿನ್ನೆಲೆ ನಾಳೆ ಸಂಜೆ ದಾವಣಗೆರೆಯಲ್ಲಿ ನಡೆಯಬೇಕಿದ್ದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹು ನಿರೀಕ್ಷಿತ ಐ ಲವ್ ಯು ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಮುಂದೂಡಲಾಗಿದೆ. ಹೌದು ಸ್ವತಃ ಉಪೇಂದ್ರ ಅವರೇ ಟ್ವಿಟ್ ಮೂಲಕ ತಿಳಿಸಿದ್ದಾರೆ. ಉಪೇಂದ್ರ ಅವರು ಟ್ವಿಟ್ ಮೂಲಕ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಯವರು ಅನಾರೋಗ್ಯದಲ್ಲಿರುವಾಗ ನಮ್ಮ ಐ ಲವ್ ಯು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಸಂಭ್ರಮಿಸುವುದು ಸೂಕ್ತವಲ್ಲ. 19ನೇ ತಾರೀಖು ಶನಿವಾರ ಸಂಜೆ ದಾವಣಗೆರೆಯಲ್ಲಿ ನಡೆಯಬೇಕಿದ್ದ ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಿದ್ದೇವೆ. ಶ್ರೀಗಳು ಆದಷ್ಟು ಬೇಗಚೇತರಿಸಿಕೊಳ್ಳಲಿ  ಎಂದು ಆ ದೇವರದಲ್ಲಿ ಪ್ರಾರ್ಥಿಸೋಣ ಎಂದು ಉಪೇಂದ್ರ ಅವರು ಟ್ವಿಟ್ ಮೂಲಕ ತಿಳಿಸಿದ್ದಾರೆ.