ಬಳ್ಳಾರಿ- ಬಿಜೆಪಿ ಶಾಸಕ ಶ್ರೀರಾಮುಲು ಅವರು ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉತ್ತರ ಕರ್ನಾಟಕ ಶಾಸಕರು ಚರ್ಚೆ ನಡೆಸುತ್ತಿದ್ದೇವೆ. ಸಮ್ಮಿಶ್ರ ಸರ್ಕಾರ ಉತ್ತರ ಕರ್ನಾಟಕದ ಜನರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದು, ಉತ್ತರ ಕರ್ನಾಟಕದ ರೈತರಿಗೆ ಹಾಗೂ ಈ ಭಾಗದ ಜನತೆಗೆ ಅನ್ಯಾಯವಾದರೆ ನಾನು ಸುಮ್ಮನಿರುವುದಿಲ್ಲ , ಇದು ಹೀಗೆ ಮುಂದುವರೆದರೆ ಪ್ರತ್ಯೇಕ ರಾಜ್ಯಕ್ಕೆ ನನ್ನ ಬೆಂಬಲ ಇದ್ದು ತೆಲಂಗಾಣ ಮಾದರಿಯಲ್ಲೆ ಹೋರಾಟ ಮುಂದುವರೆಯಲಿದ್ದು, ಉತ್ತರ ಕರ್ನಾಟಕದ ಜನ ನಾವು ಕಣ್ಣೀರು ಹಾಕಬೇಕು. ಬದಲಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರು ಹಾಕುವ ನಾಟಕ ಮಾಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಎಷ್ಟು ದಿನ ಇರೊತ್ತೊ ಅಷ್ಟು ದಿನದೊಳಗೆ ಎಷ್ಟು ಸಾಧ್ಯವೂ ಅಷ್ಟು ಲೂಟಿ ಮಾಡಲಿದೆ. ಎಂದು ಸಮ್ಮಿಶ್ರ ಸರ್ಕಾರದ ವಿರುದ್ದ ಶಾಸಕ ಶ್ರೀರಾಮುಲು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.