ಜ್ಯೋತಿಷಿ ಮಾತು ನಂಬಿ ಊರು ಬಿಟ್ಟ ಎನ್.ಆರ್ ಪುರ ತಾಲೂಕಿನ ಬಾಳೆ ಗ್ರಾಮಸ್ಥರು.

1125

ಚಿಕ್ಕಮಗಳೂರು-ಜ್ಯೋತಿಷಿ ಮಾತು ಕೇಳಿ ಗಂಟು ಮೂಟೆ ಕಟ್ಟಿಕೊಂಡು ಗ್ರಾಮವನ್ನೇ ಖಾಲಿ ಮಾಡಿರುವ ಘಟನೆ ಎನ್.ಆರ್ ಪುರ ತಾಲೂಕಿನ ಬಾಳೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಸೀಗುವಾನಿ ಗ್ರಾಮದಲ್ಲಿ ನಡೆದಿದ್ದು ಒಂದು ಕಡೆ ಮಾಟ ಮಂತ್ರ ಹಾಗೂ ಮೌಢ್ಯತೆಗೆ ಬ್ರೇಕ್ ಹಾಕ್ಬೇಕು ಅಂತಾ ಸರ್ಕಾರಗಳು ಚಾಪೆ ಕೆಳಗೆ ನುಗ್ಗಿ ಪ್ಲಾನ್ ಮಾಡ್ತಿದ್ರೆ,ಮತ್ತೊಂದು ಕಡೆ ನೀವೇನ್ ಪ್ಲಾನ್ ಮಾಡಿದ್ರು ನಾವು ಮಾಡಿಯೇ ತೀರುತ್ತೇವೆ ಅಂತಾ ರಂಗೋಲಿ ಕೆಳಗೆ ನುಗ್ಗಿ ಜ್ಯೋತಿಷಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಅಂತಾ ಕಾಣಿಸುತ್ತೆ.ಯಾಕಂದ್ರೆ ಇದಕ್ಕೆ ಪ್ರತ್ಯಕ್ಷ ಘಟನೆಯೊಂದು ನಡೆದಿದೆ.ಸುಮಾರು 60 ಅಲೆಮಾರಿ ಸಮುದಾಯದ ಹಾವು ಗೊಲ್ಲರು ಕುಟುಂಬಗಳು ಇರೋ ಈ ಗ್ರಾಮದಲ್ಲಿ ಅದ್ಯಾರೋ ಕೇರಳ ಮೂಲದ ಮಂತ್ರವಾದಿ ಮಾತನ್ನು ನಂಬಿ ಕೇವಲ ಅರ್ಧ ದಿವಸದಲ್ಲೇ 15 ವರ್ಷದಿಂದ ವಾಸಿಸುತ್ತಿದ್ದ ಊರನ್ನೇ ತೊರೆದು ಹೋಗಿದ್ದಾರೆ.ತಾವು ಸಾಕಿದ್ದ ಸಾಕು ಪ್ರಾಣಿ,ಹಸು ಕರು,ಕೋಳಿಗಳನ್ನು ಬಿಟ್ಟು ಪಲಾಯನವಾಗಿದ್ದಾರೆ .

ಸ್ಥಳಿಯರಾದ ಶೇಖಬ್ ಹೇಳುವಂತೆ ಮೂಲಭೂತ ಸೌಕರ್ಯಗಳಿಂದ ದೂರ ಉಳಿದಿದ್ದ ಇವರುಗಳು ಕೆಟ್ಟ ಚಟಗಳಿಗೆ ಬಲಿಯಾಗಿ ಆರೋಗ್ಯ ಸಮಸ್ಯೆಯಿಂದ ಪ್ರತಿದಿನ ಬಳಲುತ್ತಿದ್ರು.ಕೆಲವು ದಿನಗಳಿಂದ ಸಾವು ನೋವುಗಳು ಪ್ರಾರಂಭವಾಗುತ್ತಿದಂತ್ತೇ ಭಯಗೊಂಡ ಗ್ರಾಮದವರು ಕೇರಳ ಮೂಲದ ಮಂತ್ರವಾದಿ ಬಳಿ ಹೋಗಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ ,ನೀವು ನಾಗರ ಕಟ್ಟೆ ಪ್ರತಿಷ್ಠಾಪನೆ ಮಾಡ್ಬೇಕು ಅಂತ ಆ ಮಂತ್ರವಾದಿ ಹೇಳಿ ಕಳುಹಿಸಿದನಂತೆ ಆದ್ರೂ ಸಹ ಸಾವು ನೋವುಗಳು ಮಾತ್ರ ನಿಲ್ಲಲಿಲ್ಲ.ಕೊನೆಗೆ ನಿನ್ನೆ ಸಂಜೆ ವೇಳೆ ಸ್ಥಳಕ್ಕೆ ಬಂದ ಕೇರಳ ಮೂಲದ ಮಂತ್ರವಾದಿ ಇಲ್ಲಿ ಒಂದು ಆತ್ಮ ಓಡಾಡುತ್ತಿದೆ ನಿವೇನಾದ್ರು ಗ್ರಾಮ ತೊರೆಯದಿದ್ದರೆ ರಕ್ತಕಾರಿ ಸಾಯುತ್ತಿರಿ ಎಂದು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿ ಹೋಗಿದ್ದಾನೆ,ಅಷ್ಟೇ ಇಡೀ ಗ್ರಾಮಕ್ಕೆ ಗ್ರಾಮವೇ ಇಂದು ಬೆಳಿಗ್ಗೆ ಅಷ್ಟೊತ್ತಿಗೆ ಗ್ರಾಮವನ್ನೇ ತೊರೆದು,ಮತ್ತೊಮ್ಮೆ ಈ ಗ್ರಾಮದ ಕಡೆ ತಲೆ ಹಾಕಿಯು ಮಲಗೋದಿಲ್ಲ ಅಂತ ಖಾಲಿ ಮಾಡಿದ್ದಾರೆ.