ಸಾಯುವ ಮುನ್ನ ಒಮ್ಮೆಯಾದ್ರು ಮಾಜಿ ಸಿಎಂ ಕುಮಾರಸ್ವಾಮಿ ನೋಡಬೇಕು, ಕಡೂರು ಯುವಕನ ಕಣ್ಣೀರ ಕಥೆ….!

1052

ಚಿಕ್ಕಮಗಳೂರು : ನಾಲ್ಕೈದು ವರ್ಷದಿಂದ ಶುಗರ್ ಹಾಗೂ ಬಿ.ಪಿಯಿಂದ ನರಳುತ್ತಿರೋ ಯುವಕನೊಬ್ಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನ ನೋಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹಿರೇಗರ್ಜೆ ಗ್ರಾಮದ 24 ವರ್ಷದ ಜಗದೀಶ್‍ಗೆ ಕುಮಾರಸ್ವಾಮಿಯನ್ನ ನೋಡುವ ಆಸೆ ಮತ್ತು ಹಂಬಲ. ಬಿ.ಎ. ಪದವೀಧರನಾಗಿರೋ ಜಗದೀಶ್‍ಗೆ ನಾಲ್ಕೈದು ವರ್ಷಗಳಿಂದ ಬಿಪಿ ಹಾಗೂ ಶುಗರ್. 75 ಕೆ.ಜಿ. ಇದ್ದ ಜಗದೀಶ್ ಆರೋಗ್ಯದ ಸಮಸ್ಯೆಯಿಂದ 15-20 ಕೆ.ಜಿ. ತೂಕಕ್ಕೆ ಬಂದಿದ್ದಾನೆ. ಮನೆಯಲ್ಲಿ ಈತನೆ ಸೇವೆಗೆ ಯಾರಾದ್ರು ಒಬ್ಬರು ಇರಲೇಬೇಕು. ಎದ್ದು ಓಡಾಡೋದಕ್ಕೂ ಆಗದ ಜಗದೀಶ್‍ಗೆ ಮಲಗಿದ ಜಾಗದಲ್ಲೇ ಎಲ್ಲಾ.

ಹೆತ್ತವರು ಕೂಲಿ-ನಾಲಿ ಮಾಡಿ ನಾಲ್ಕೈದು ಲಕ್ಷ ಖರ್ಚು ಮಾಡಿದ್ರು ಮಗನನನ್ನ ಗುಣಪಡಿಸೋಕೆ ಆಗ್ಲಿಲ್ಲ. ಎಲ್ಲಾ ಪ್ರಯತ್ನ ಮಾಡಿ, ದಿನದಿಂದ ದಿನಕ್ಕೆ ಆರೋಗ್ಯದ ಸ್ಥಿತಿ ಹದಗೆಡ್ತಿರೋ ಮಗನ ಸ್ಥಿತಿಕಂಡು ಇದೀಗ ಕೈಚೆಲ್ಲಿ ಕೂತಿದ್ದಾರೆ. ಆದ್ರೆ, ಜಗದೀಶ್‍ಗೆ ಸಾಯುವ ಮುನ್ನ ಕುಮಾರಸ್ವಾಮಿಯನ್ನ ನೋಡುವ ಆಸೆ. ನಾನು ಸಾಯುವ ಮುನ್ನ ಶಾಸಕ ವೈ.ಎಸ್.ವಿ ದತ್ತ ಹಾಗೂ ಕುಮಾರಸ್ವಾಮಿಯನ್ನ ನೋಡಬೇಕೆಂಬ ಆಸೆ ಹೊಂದಿದ್ದ. ಆದ್ರೆ, ಶಾಸಕ ದತ್ತ ಅವರು ಬಂದು ನೋಡಿಕೊಂಡು ಹೋಗಿದ್ದಾರೆ. ಇದೀಗ ಕೊನೆ ಬಾರಿ ಕುಮಾರಸ್ವಾಮಿಯನ್ನ ನೋಡಬೇಕೆಂದು ಹಂಬಲಿಸುತ್ತಿದ್ದಾನೆ. ನಾನು ಸಾಯುವ ಮುನ್ನ ಅವರನ್ನ ನೋಡ್ಬೇಕು ಅನ್ನೋದು ಈತನ ಬಯಕೆ. ಕುಮಾರಸ್ವಾಮಿ ಅಂದ್ರೆ ಈತನಿಗೆ ಅಷ್ಟು ಇಷ್ಟವಂತೆ.