ಮೋದಿಯಂತೆ ಉಪನ್ಯಾಸ ನೀಡಲು ನನಗೆ ವರ್ಷ ಬೇಕು : ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ

498

ಸೂರತ್: ಪ್ರಧಾನಿ ನರೇಂದ್ರ ಮೋದಿ ಅವರಂತೆ ಉಪನ್ಯಾಸ ನೀಡಲು ನನಗೆ ವರ್ಷಗಟ್ಟಲೇ ಬೇಕು. ನನಗೆ ಜನರ ಸಮಸ್ಯೆ ಆಲಿಸಿ, ಸೂಕ್ತ ಪರಿಹಾರ ನನ್ನ ಆದ್ಯ ಕರ್ತವ್ಯ,’ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.ಸೂರತ್ನಲ್ಲಿ ನಡೆದ ಉದ್ಯಮ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿ, ‘ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಾಕಷ್ಟು ವ್ಯತ್ಯಾಸವಿದೆ.

ಬಿಜೆಪಿಯವರಿಗೆ ಭಾಷಣ ಮಾಡಲು ಬರುತ್ತದೆಯೇ ಹೊರತು, ಜನರ ಸಮಸ್ಯೆ ಆಲಿಸುವುದೇ ಗೊತ್ತಿಲ್ಲ, ಎಂದು ಟೀಕಿಸಿದ್ದಾರೆ. ಬಿಜೆಪಿ ನಾಯಕರು ಎಲ್ಲರೊಡನೆ ಸ್ನೇಹದಿಂದ ವರ್ತಿಸುತ್ತಾರೆಯೇ ಹೊರತು, ಸಮಸ್ಯೆಗೆ ಸ್ಪಂದಿಸುವುದಿಲ್ಲ. ನಾನು ಮೋದಿಯವರಂತೆ ಬಣ್ಣದ ಮಾತುಗಳನ್ನಾಡಿ, ಜನರನ್ನು ಮರಳು ಮಾಡುವುದಿಲ್ಲ. ಅದು ನನಗೆ ಆಗದ ಕೆಲಸ,’ ಎಂದು ರಾಹುಲ್ ಮೋದಿಯನ್ನು ಮೂದಿಲಿಸಿದ್ದಾರೆ.

LEAVE A REPLY

Please enter your comment!
Please enter your name here