ಬೆಂಗಳೂರು : ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸುಮಲತಾ ಅಂಬರೀಶ್ ಅವರು ಮಂಡ್ಯದ ಸಮಸ್ತ ಅಭಿಮಾನಿಗಳಿಗೆ ನಮಸ್ಕಾರಗಳು. ಜೀವನದಲ್ಲಿ ಕೆಲವು ಸವಾಲುಗಳನ್ನು ನಾವೇ ಹುಡುಕಿಕೊಳ್ಳುತ್ತೇವೆ. ಮತ್ತೆ ಕೆಲವು ಸವಾಲುಗಳು ತಾವಾಗೆ ಬರುತ್ತವೆ. ನಾಲ್ಕು ತಿಂಗಳ ಹಿಂದೆ ಅಂತದ್ದೊಂದು ಕ್ಷಣ ನನಗಾಗಿತ್ತು. ಅಂಬರೀಶ್ ತೀರಿಕೊಂಡಾಗ ಈ ಜೀವನದಲ್ಲಿ ಏನಿದೆ ಎಂಬ ಭಾವನೆ ನನ್ನಲ್ಲಿ ಶುರುವಾಗಿತ್ತು. ಅಂಬಿ ತೀರಿಕೊಂಡಾಗ ನನ್ನ ಜೊತೆಗಿದ್ದು ಧೈರ್ಯ ಹೇಳಿದವರು ಅವರ ಅಭಿಮಾನಿಗಳು ಹಾಗೂ ಮಂಡ್ಯ ಜನ. ಅಂಬರೀಶ್ ಅವರು ಯಾವಾಗಲೂ ನಾನು ನನ್ನ ಕುಟುಂಬ ಎನ್ನುತ್ತಿರಲಿಲ್ಲ. ಯಾವಾಗಲೂ ಸ್ನೇಹಿತರ ಜೊತೆಗಿರುತ್ತಿದ್ದರು. ಅಂಬರೀಷ್ ಅವರನ್ನು ಪ್ರೀತಿಸುವ ಜನತೆ ಧೈರ್ಯ ಕಳೆದುಕೊಳ್ಳಬೇಡಿ ಎಂದು ನನಗೆ ಧೈರ್ಯ ಹೇಳಿದರು. ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡುತ್ತೇನೆ. ಇದೇ 20ರಂದು ಬೆಳಗ್ಗೆ 10 ಗಂಟೆಗೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ಪ್ರಕಟಿಸಿದರು. ಈ ಸಂದರ್ಭದಲ್ಲಿ
ನಟರಾದ್ ಯಶ್, ದರ್ಶನ್, ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.