ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ದೇಶದ ಎಲ್ಲಾ ರೈತರ ಸಾಲ ಮನ್ನಾ ಮಾಡಲಾಗುವುದು :ಕಾಂಗ್ರೆಸ್ ಟ್ವೀಟ್…

231
firstsuddi

ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಯಾವ ರೀತಿಯ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದು ಕಾಂಗ್ರೆಸ್ ಕರ್ನಾಟಕ ಟ್ವೀಟ್ ಮಾಡಿದೆ.
• ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಗಬ್ಬರ್ ಸಿಂಗ್ ಟ್ಯಾಕ್ಸ್ ಪದ್ಧತಿಯನ್ನು ರದ್ದುಗೊಳಿಸಿ, ಜಿ.ಎಸ್.ಟಿ. ಸರಳೀಕರಣ ಮಾಡಲಾಗುವುದು. ಈ ಮೂಲಕ ದೇಶದ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳನ್ನ ಮರು ಸ್ಥಾಪಿಸಿ ಆ ಮೂಲಕ ಉದ್ಯೋಗ ಅವಕಾಶ ಹೆಚ್ಚಿಸಲಾಗುವುದು.
•  ನಿರುದ್ಯೋಗ ಸಮಸ್ಯೆಯಿಂದ ಸಂಕಷ್ಟದಲ್ಲಿರುವ ದೇಶದ ಎಲ್ಲರಿಗೂ ಕನಿಷ್ಟ ಆದಾಯ ಖಾತರಿ ನೀಡಲಾಗುವುದು.
•  ‘ಮಹಿಳಾ ಮೀಸಲಾತಿ ಮಸೂದೆ’ ಯನ್ನು ಜಾರಿಗೆ ತರುವ ಮೂಲಕ ಸಂಸತ್ತು ಮತ್ತು ವಿಧಾನಮಂಡಲಗಳಲ್ಲಿ ಮಹಿಳೆಯರಿಗೆ ಶೇ. ೩೩% ಮೀಸಲಾತಿಯನ್ನು ನೀಡಲಾಗುವುದು. ಆ ಮೂಲಕ ಮಹಿಳೆಯರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲಿದೆ.
• ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಿರಲಿ ತನ್ನ ಆರ್ಥಿಕ ನೀತಿಗಳಿಂದಾಗಿ ದೇಶವನ್ನು ಅಧೋಗತಿಗೆ ನರೇಂದ್ರ ಮೋದಿ ತಳ್ಳಿದ್ದಾರೆ. 2011-12 ಮತ್ತು 2017-18ರ ನಡುವೆ ಗ್ರಾಮೀಣ ಭಾರತದಲ್ಲಿ 3.2ಕೋಟಿ ಹಂಗಾಮಿ ಕಾರ್ಮಿಕರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಈ ಪೈಕಿ ಸುಮಾರು 3ಕೋಟಿ ಜನರು ಕೃಷಿಕ್ಷೇತ್ರದಲ್ಲಿ ದುಡಿಯುತ್ತಿದ್ದರು.
• ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ದೇಶದಲ್ಲಿ ಹೆಣ್ಣುಮಕ್ಕಳ ಶೈಕ್ಷಣಿಕ ಸಾಮರ್ಥ್ಯ ಹೆಚ್ಚಿಸಲು ದೇಶದ ಒಟ್ಟು ಜಿಡಿಪಿಯ 6% ರಷ್ಟು ಹಣವನ್ನ ಶಿಕ್ಷಣಕ್ಕೆ ಮೀಸಲಿಡಲಾಗುದು.
• ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ದೇಶದ ಎಲ್ಲಾ ರೈತರ ಸಾಲ ಮನ್ನಾ ಮಾಡಲಾಗುವುದು.
• ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ದೇಶದ ಮಹಿಳೆಯರ ಸ್ವಾವಲಂಬಿ ಬದುಕಿನ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರಿ ಕೆಲಸ ಹಾಗೂ ಪಿ.ಎಸ್.ಯು.ಎಸ್ ನಲ್ಲಿ ಮಹಿಳೆಯರಿಗೆ ಶೇ. 33% ರಷ್ಟು ಮೀಸಲಾತಿ ನೀಡಲಾಗುವುದು
• ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೃಷಿ ಬಿಕ್ಕಟ್ಟು ನಿವಾರಣೆಗಾಗಿ, ಆಯಾ ಭಾಗದಲ್ಲಿ ರೈತರು ಬೆಳೆವ ಬೆಳೆಗೆ ಪೂರಕವಾಗಿ ಕೈಗಾರಿಕೆಗಳನ್ನ ಸ್ಥಾಪಿಸಲಾಗುವುದು. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುವಂತೆ ನೋಡಿಕೊಳ್ಳುವುದರ ಜೊತೆಗೆ ಕೃಷಿಗೆ ಪೂರಕ ಉದ್ಯೋಗಗಳನ್ನ ಸೃಷ್ಟಿಸಲಾಗುವುದು.
• ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಭಾರತೀಯರಿಗೆ ಗರಿಷ್ಠ ಆರೋಗ್ಯ ಖಾತರಿ ನೀಡಲಾಗುವುದು. ಆಯುಷ್ಮಾನ್ ಭಾರತ್ ನಂತೆ ಸೀಮಿತ ಜನರಿಗೆ ಕನಿಷ್ಟ ಹಣ ನೀಡುವುದು ನಮ್ಮ ಯೋಜನೆಯ ಗುರಿಯಲ್ಲ. ಹೆಲ್ತ್ ಕೇರನ್ನು ಒಂದು ಮೂಲಭೂತ ವಿಚಾರವಾಗಿ ಪರಿಗಣಿಸಿರುವುದರಿಂದ ಆರೋಗ್ಯ ವೃತ್ತಿಪರರ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಕಾಂಗ್ರೆಸ್ ಕರ್ನಾಟಕ ಟ್ವಿಟ್ ಮಾಡಿದೆ .