ಜಿಲ್ಲಾ ಆಸ್ಪತ್ರೆಯಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಕನ್ನಡಸೇನೆಯಿಂದ ಹೋರಾಟ ಅನಿವಾರ್ಯ

398

ಚಿಕ್ಕಮಗಳೂರು : ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆಯಿಲ್ಲದೆ ಆಗಿರುವ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಕನ್ನಡಸೇನೆ ಜಿಲ್ಲಾ ಘಟಕದ ಕಾರ್ಯಕರ್ತರು ಮಂಗಳವಾರ ಜಿಲ್ಲಾ ಸರ್ಜನ್ ಡಾ.ದೊಡ್ಡಮಲ್ಲಪ್ಪ ರವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಆಸ್ಪತ್ರೆಗೆ ತೆರಳಿ ಮಾತನಾಡಿ, ವೈದ್ಯೋ ನಾರಾಯಣೋ ಹರಿ ಎಂಬ ಗಾದೆ ಮಾತಿದೆ. ಇಲ್ಲಿ ಆ ಗಾದೆ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎಂಬ ದೂರಿದೆ .ನಾವು ವೈದ್ಯರ ಕೆಲಸವನ್ನು ದೂರುತ್ತಿಲ್ಲ. ಆದರೆ ಇಲ್ಲ ಬರುವ ರೋಗಿಗಳಿಗೆ ಸಮರ್ಪಕವಾದ ಚಿಕಿತ್ಸೆ ಸಿಗದೆ ಕೆಲವರು ತೀವ್ರ ತೊಂದರೆ ಅನುಭವಿಸಿದ್ದಾರೆ ಎಂದರು. ಯಾವುದೇ ರೋಗಿ ಆಸ್ಪತ್ರೆಯಲ್ಲಿ ದಾಖಲಾದ ಸಂದರ್ಭದಲ್ಲಿ ಡ್ರಿಪ್ಸ್ ಅಥವಾ ಆಕ್ಸಿಜನ್ ಹಾಕಿರುವಾಗ ಅವರ ಬಳಿ ಯಾವುದೆ ಸಿಬ್ಬಂದಿಗಳು ಇಲ್ಲದೆ ಒಮ್ಮೆ ಒಂದು ಮಗುವಿಗೆ ಪ್ರಾಣಾಹಾನಿಯಾಗಿದೆ ಇದು ಇಲ್ಲಿನ ನಿಲ್ರ್ಯಕ್ಷ್ಯಕ್ಕೆ ಕಾರಣವಾಗಿದೆ ಎಂದು ದೂರಿದರು. ಆಸ್ಪತ್ರೆ ಚೆನ್ನಾಗಿದೆ, ವೈದ್ಯರು ಕೆಲಸ ಮಾಡುತ್ತಿದ್ದಾರೆ. ಆದರೆ ಅದರ ನಿರ್ವಹಣೆ ನಿರಂತರವಾಗಿರಬೇಕು ಜೊತೆಗೆ ಶಿಫ್ಟ್ ಕ್ರಮ ಇರುವುದರಿಂದ ಸಿಬ್ಬಂದಿಗಳಿಗೆ ಕೊರತೆ ಇರದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ .ಬಡವರಿಗೆ ತೊಂದರೆಯಾದಾಗ ಸರ್ಕಾರಿ ಆಸ್ಪತ್ರೆಯೆ ದೇವಾಲಯವಾಗಿರುತ್ತದೆ .ವೈದ್ಯರನ್ನು ದೇವರೆಂದು ನಂಬಿ ರೋಗಿಗಳು ಬಂದಿರುತ್ತಾರೆ. ಕೆಲವೊಮ್ಮೆ ವೈದ್ಯರು, ಸಿಬ್ಬಂದಿಗಳ ಬೇಜವಬ್ದಾರಿಯಿಂದ ಅಚಾತುರ್ಯವಾದಾಗ ರೋಗಿ ಕುಟುಂಬವೇ ಬೀದಿಪಾಲಾಗುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಿ ಎಂದು ಸರ್ಜನ್‍ಗೆ ಸಲಹೆ ಮಾಡಿದರು.

 

LEAVE A REPLY

Please enter your comment!
Please enter your name here