ಹುಬ್ಬಳ್ಳಿ: ಭಾರತ್ ಬಂದ್ ಹಿನ್ನೆಲೆ ಕಳ್ಳರು 16 ಅಂಗಡಿಗಳಲ್ಲಿ ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಅಮರಗೋಳ ಎಪಿಎಮ್ಸಿಯಲ್ಲಿ ಕಳ್ಳತನ ನಡೆದಿದ್ದು, ನಿನ್ನೆ ಬಂದ್ಗೆ ಬೆಂಬಲ ನೀಡಿದ್ದ ಎಪಿಎಂಸಿ ವರ್ತಕರು ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಕಳ್ಳರು ಅಂಗಡಿಗಳ ಒಳಗೆ ನುಗ್ಗಿ ಸುಮಾರು 7 ಲಕ್ಷಕ್ಕೂ ಅಧಿಕ ಹಣ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಕಳ್ಳರು ಹಣವನ್ನು ಕಡಿಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.










