ಬೆಂಗಳೂರು- ಬೆಂಗಳೂರಿನಲ್ಲಿ ಮಾತನಾಡಿದ ಜೆ.ಡಿ.ಎಸ್ ವರಿಷ್ಠ ದೇವೇಗೌಡ ಅವರು ಕುಮಾರಸ್ವಾಮಿ ಅವರು ಬೆಳಿಗ್ಗೆಯಿಂದ ಸಂಜೆಯ ವರೆಗೆ 18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದು, ಅವರಿಗೆ ಗ್ರಾಮ ವಾಸ್ತವ್ಯ ಮಾಡಲು ಸಮಯ ಎಲ್ಲಿದೆ? ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ನನಗೆ ಆತಂಕವಿದೆ. ಹಾಗೂ ಹಿಂದಿನ ಸರ್ಕಾರದ 4000 ಕೋಟಿ ರೂ ಸಾಲಮನ್ನಾದ ಬಾಕಿ ಇದ್ದು ಸಾಲ ತೀರಿಸುವ ಜವಾಬ್ದಾರಿಯನ್ನು ಕುಮಾರಸ್ವಾಮಿ ಅವರು ಹೊತ್ತುಕೊಂಡಿದ್ದಾರೆ. ಮುಖ್ಯಮಂತ್ರಿ ಅವರು ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುತ್ತಾರೆ. ಇದಕ್ಕೆ ಮೂರ್ನಾಲ್ಕು ತಿಂಗಳ ಸಮಯ ಬೇಕಲ್ಲವೇ? ಬಿ.ಜೆ.ಪಿಯವರ ರಾಜಕೀಯ ಆಟಗಳನ್ನು ಗಮನಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.