ಮೈಸೂರು : ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಜೆಡಿಎಸ್ ಕಿಂಗ್ ಮೇಕರ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಯಾವುದೇ ಸಮೀಕ್ಷೆಗಳ ಬಗ್ಗೆ ನನ್ನ ತಕರಾರಿಲ್ಲ. ನಾನು ಕಿಂಗ್ ಮೇಕರ್ ಅಲ್ಲ, ಜನ ನನ್ನನ್ನ ಕಿಂಗ್ ಮಾಡೋಕೆ ತಿರ್ಮಾನ ಮಾಡಿದ್ದಾರೆ.ಈ ಹಿಂದೆ ತಮ್ಮ ಪಕ್ಷದ ಹೆಸರನ್ನ ಹೇಳದೆ ಎರಡು ಸ್ಥಾನಕ್ಕೆ ನಿಲ್ಲಿಸಿದ್ರು. ಆಗ ನಾನು ೫೮ ಸ್ಥಾನ ಗೆದ್ದಿದ್ದೆ. ಹಿಂದಿನ ದಿನಗಳಿಗಿಂತ ಈಗ ಪಕ್ಷದ ವರ್ಚಸ್ಸು ಹೆಚ್ಚಾಗಿದೆ. ಇಂಡಿಯಾ ಟುಡೇ ಹೇಳಿರುವ ಕಾಂಗ್ರೆಸ್ ನೂರು ಸ್ಥಾನ, ಜೆಡಿಎಸ್ಗೆ ಬರುತ್ತೆ. ಕಾಂಗ್ರೆಸ್ ಗೆ ೪೦ ಸ್ಥಾನ ಬರುತ್ತೆ. ಮುಖ್ಯಮಂತ್ರಿ ಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಇಂಡಿಯಾ ಟುಡೇ ಸಮೀಕ್ಷೆ ಯಾವ ರೀತಿ ಮಾಡಿದ್ದಾರೆ ನನಗೆ ತಿಳಿದಿಲ್ಲ ಎಂದು ಟೀಕಿಸಿದರು.
ಈ ಸಮೀಕ್ಷೆಯು ಬರಿ ಸುಳ್ಳಿನಿಂದ ಕೂಡಿದೆ. ಈ ಸಮೀಕ್ಷೆ ತಲೆಕೆಳಗಾಗಿ ಅಧಿಕಾರಕ್ಕೆ ಬರೋದು ನಾವೇ.ಕಾಂಗ್ರೆಸ್ ಮತ್ತು ಬಿಜೆಪಿ ಇನ್ನು ಕೂಡ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ಟಿಕೇಟ್ ಗಾಗಿ ಪಕ್ಷದ ಮುಖಂಡರು ಬಡಿದಾಡುತ್ತಿದ್ದಾರೆ ಆದರೆ ಈಗ ಇಂಡಿಯ ಟುಡೇ ಸಮೀಕ್ಷೆಯಲ್ಲಿ ನಿಖರತೆ ಇಲ್ಲ . 100ಕ್ಕಿಂತ ಹೆಚ್ಚು ಸ್ಥಾನಗಳನ್ನು ಜೆಡಿಎಸ್ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.