ಸಿಎಂ ಒಂದು ತಿಂಗಳು ಪ್ರವಾಸ ಮಾಡಲಿ, ಎರಡು ಕ್ಷೇತ್ರಗಳಿಗೂ ಪ್ರಚಾರಕ್ಕೆ ಹೊಗಲ್ಲ, ಕ್ಷೇತ್ರದ ಜನ ಗೆಲ್ಲಿಸುತ್ತಾರೆ : ಹೆಚ್ಡಿಕೆ

400

ಮೈಸೂರು : ನಾನು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಸಿಎಂ ಒಂದು ದಿನ ಅಲ್ಲ. ಒಂದು ತಿಂಗ್ಳು ಪ್ರವಾಸ ಮಾಡಲಿ. ನಾನು ರಾಮನಗರ ಮತ್ತು ಚನ್ನಪಟ್ಟಣ ಎರಡು ಕ್ಷೇತ್ರಗಳಿಗೂ ಪ್ರಚಾರಕ್ಕೆ ಹೊಗಲ್ಲ.ಆದ್ರೂ ಆ ಕ್ಷೇತ್ರಗಳ ಜನ ನನ್ನನ್ನ ಗೆಲ್ಲಿಸುತ್ತಾರೆ ಎಂದು ಜೆಡಿಎಸ್  ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದರು. ಚಾಮುಂಡೇಶ್ವರಿ ಕ್ಷೇತ್ರ ಪ್ರವಾಸಕ್ಕೂ ಮುನ್ನ ಸಿಎಂ ಸಿದ್ದುಗೆ ಟಾಂಗ್ ನೀಡಿದ ಹೆಚ್.ಡಿ ಕುಮಾರಸ್ವಾಮಿ, ರಾಮನಗರ ಜನತೆ ನನ್ನ ನಡುವೆ ತಾಯಿ ಮನಗ ಸಂಬಂಧ ಅನ್ನೊದು ಎಲ್ರಿಗೂ ಗೊತ್ತಿದೆ. ರಾಮನಗರಕ್ಕೂ ಸಿದ್ದರಾಮಯ್ಯಗೂ ಸಂಬಂಧ ಇಲ್ಲ. ಆದರೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ಗಿಂತಲೂ ಹೆಚ್ಚು ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ನೂರು ಹಳ್ಳಿಗಳಲ್ಲಿ ಪ್ರಚಾರ ಮಾಡ್ತಿನಿ. ಜಿಟಿ.ದೇವೇಗೌಡರೇ ಚುನಾವಣೆ ಎದುರಿಸಲು ಸಮರ್ಥವಾಗಿದ್ದಾರೆ. ಆದರೂ ಆಯ್ದ ಕ್ಷೇತ್ರಗಳಲ್ಲಿ ಪ್ರವಾಸ ಮಾಡುವೆ. ಹಾಗೆಯೇ ನಾಮಪತ್ರ ಸಲ್ಲಿಕೆ ನಂತರ ಮತ್ತೊಮ್ಮೆ ಎಲ್ಲೆಡೆ ಪ್ರವಾಸ ಹೋಗುವೆ ಎಂದರು.

ಸಿ ಎಂ ಸಿದ್ದರಾಮಯ್ಯ ಒಕ್ಕಲಿಗರಿಗೆ ಗಾಳ ಹಾಕಿದ್ರೆ ಹೆಚ್ ಡಿ ಕುಮಾರಸ್ವಾಮಿ ಕುರುಬ ಸಮಾಜದ ಮತ ಸೆಳೆಯಲು ಪ್ಲಾನ್ ರೂಪಿಸಿದ್ದಾರೆ. ಕುರುಬ ಸಮುದಾಯವೇ ಹೆಚ್ಚಿರುವ ಮೈಸೂರಿನ  ಕೋಟೆಹುಂಡಿಗೆ ಹೆಚ್ ಡಿ ಕುಮಾರಸ್ವಾಮಿ ಎಂಟ್ರಿ ಕೊಟ್ಟರು. ಗ್ರಾಮಕ್ಕೆ ಪ್ರವೇಶಿಸಿದ ಹೆಚ್.ಡಿಕೆಗೆ ಮಹಿಳೆಯರಿ ಪೂರ್ಣ ಕುಂಬ ಸ್ವಾಗತ ಕೋರಿದರು. ಈ ವೇಳೆ ಜನರ ಒತ್ತಾಯಕ್ಕೆ ಮಣಿದು ಹೆಚ್.ಡಿಕೆ ಕುಮಾರ ಪರ್ವ ವಾಹನ ಇಳಿದರು. ಕೋಟೆ ಹುಂಡಿ ಗ್ರಾಮದಲ್ಲಿ ಭರ್ಜರಿ ರೆಸ್ಪಾನ್ಸ್  ದೊರೆತಿತ್ತು,ಶಾಸಕ ಜಿ ಟಿ ದೇವೇಗೌಡ,ಬಿರೀಹುಂಡಿ ಬಸವಣ್ಣ, ಮಾಜಿ ಮೇಯರ್ ಎಂ ಜಿ ರವಿಕುಮಾರ್ ಭಾಗಿಯಾಗಿದ್ದರು