ಮೂಡಿಗೆರೆಯಲ್ಲಿ ಬಿಜೆಪಿ ಟಿಕೆಟ್‍ಗಾಗಿ ಭಯಂಕರ ಲಾಬಿ…! ಆಕಾಂಕ್ಷಿಗಳ ಲೀಸ್ಟ್ ಕೇಳಿದ್ರೆ ಕಳೆದೇ ಹೋಗ್ತೀರಾ…!

3486

ಮೂಡಿಗೆರೆ : ಮಾಜಿ ಶಾಸಕ ಕುಮಾರಸ್ವಾಮಿ. ದೀಪಕ್ ದೊಡ್ಡಯ್ಯ, ಧರ್ಮಯ್ಯ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಶ್ರೀ, ನರೇಂದ್ರ, ಚೇತನ್, ಶೃಂಗೇರಿ ಶಿವಣ್ಣ, ಬಣಕಲ್ ಶಾಮಣ್ಣ. ಬಿದರಳ್ಳಿ ಜೈಪಾಲ್. ಮುಂಬರೋ ವಿಧಾನಸಭಾ ಚುನಾವಣೆಗೆ ಮೂಡಿಗೆರೆ ಬಿಜೆಪಿಯಿಂದ ಇಷ್ಟು ಜನರಲ್ಲಿ ಅಭ್ಯರ್ಥಿ ಯಾರು. ಯಾರಿಗೂ ಗೊತ್ತಿಲ್ಲ. ಯಾರನ್ನೇ ಕೇಳಿದ್ರು ನಾನೇ ಅಂತಿದ್ದಾರೆ. ಮತದಾರರು, ಕಾರ್ಯಕರ್ತರು ದಾರಿಕಾಣದಂತಾಗಿದ್ರೆ, ಯಾರಿಗೆ ಟಿಕೆಟ್ ನೀಡಬೇಕೆಂದು ಪಕ್ಷದ ಮುಖಂಡರಿಗೆ ಮೂಡಿಗೆರೆ ಕಗ್ಗಂಟ್ಟಾಗಿರೋದ್ರಲ್ಲಿ ಎರಡು ಮಾತಿಲ್ಲ.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಿಜೆಪಿ ಕಣ ರಂಗು-ರಂಗಾಗುತ್ತಿದೆ. ಮತದಾರರು ರಾತ್ರಿ ಕೇಳಿದ ಹೆಸರಿನ ವ್ಯಕ್ತಿಯನ್ನ ವಿಮರ್ಶೆ ಮಾಡಿ ಏಳುವಷ್ಟರಲ್ಲಿ ಬೆಳಗ್ಗೆ ಮತ್ತೊಂದು ಹೆಸರು. ಇದರಿಂದ ಮತದಾರರು ತೀವ್ರ ಗೊಂದಲಕ್ಕೀಡಾಗಿರೋದಂತು ಸತ್ಯ. ಜೆಡಿಎಸ್ ಅಭ್ಯರ್ಥಿ ಬಿ.ಬಿ.ನಿಂಗಯ್ಯ ಎಂಬುದು ಕನ್ಫರ್ಮ್ ಆಗಿದೆ. ಇನ್ನು ಕಾಂಗ್ರೆಸ್‍ನಿಂದ ಚಿತ್ರದುರ್ಗದ ಸಂಸದ ಚಂದ್ರಪ್ಪ, ಮಾಜಿ ಸಚಿವೆ ಮೋಟಮ್ಮ, ನಾಗರತ್ನ ಅಂತೆಲ್ಲಾ ಹೆಸರು ಕೇಳಿ ಬರ್ತಿದ್ರು ಮತದಾರರು ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಅಷ್ಟಾಗಿ ಗೊಂದಲಗಳಿಲ್ಲ. ಆದ್ರೆ, ಬಿಜೆಪಿಗೆ ಬಂದ್ರೆ 10ಕ್ಕೂ ಹೆಚ್ಚು ಮಂದಿ ನಂಗೇ ಟಿಕೆಟ್ ಎಂದು ಹೇಳಿಕೊಂಡು ಓಡಾಡ್ತಿರೋದ್ರಿಂದ ಕಾರ್ಯಕರ್ತರು ಯಾರಿಗೆ ಸಪೋರ್ಟ್ ಮಾಡಬೇಕು, ಯಾರ ಜೊತೆ ಓಡಾಡಬೇಕು, ಯಾರು ಒಳ್ಳೆಯರು ಎಂಬುದೇ ತಿಳಿಯದೆ ಕೆಲ ಕಾರ್ಯಕರ್ತರು ಪಕ್ಷದ ಕಚೇರಿ ಕಡೆ ಓಡಾಡೋದನ್ನೇ ಕೈಬಿಟ್ಟಿದ್ದಾರೆ.

ನಿಜ, ಚುನಾವಣೆ ಹತ್ತಿರ ಬಂದಂತೆ ಏನೇ ಮನಸ್ತಾಪಗಳಿದ್ರು ಎಲ್ಲರೂ ಒಂದಾಗಿ ಪಕ್ಷದ ಅಭಿವೃದ್ಧಿ ಹಾಗೂ ಪಕ್ಷವನ್ನ ಅಧಿಕಾರಕ್ಕೆ ತರೋ ನಿಟ್ಟಿನಲ್ಲಿ ದುಡಿಯಬೇಕು. ಹಣವೊಂದಿದ್ರೆ ಎಂಎಲ್‍ಎ ಆಗ್ತೀನಿ ಅನ್ನೋದು ದಡ್ಡತನದ ಪರಮಾವಧಿ. ಹಣ, ಜನ, ಸೇವಾ ಮನೋಭಾವ, ಶಿಕ್ಷಣ ಎಲ್ಲವೂ ಬೇಕು. ಆದ್ರೆ, ಮೂಡಿಗೆರೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಿಂದ ಹಿಡಿದು ಮಾಜಿ ಶಾಸಕರವರ್ಗೂ ಟಿಕೆಟ್ ನಂಗೇ ಅಂತಿದ್ದಾರೆ. ಅವರ ಜೊತೆ ಮಾತುಕತೆ ಆಗಿದೆ, ಇವರು ನಿಂಗೇ ಟಿಕೆಟ್ ಎಂದಿದ್ದಾರೆ ಎಂದು ಎಲ್ಲರೂ ಸೇರಿ ಮೂಡಿಗೆರೆಯಲ್ಲಿ ಬಿಜೆಪಿಯನ್ನ ಮಕಾಡೆ ಮಲಗಿಸುತ್ತಿರೋದಂತು ಸುಳ್ಳಲ್ಲ. ಆದ್ರೆ, ಅಭ್ಯರ್ಥಿ ಎಂದು ಹೇಳಿಕೊಂಡವರ ಜೊತೆಗೆಲ್ಲಾ ಕಾರ್ಯಕರ್ತರು ಹರಿದು-ಹಂಚಿ ಹೋಗಿರೋದ್ರಿಂದ ಮೂಡಿಗೆರೆ ಬಿಜೆಪಿಯದ್ದು ಮನೆಯೊಂದು ಮೂರು ಬಾಗಿಲಾಗಿದೆ. ಚುನಾವಣೆ ವೇಳೆ ಇನ್ನೆಷ್ಟಾಗುತ್ತೋ ರಾಷ್ಟ್ರಾಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರೇ ಹೇಳಬೇಕು.

ಇವರೆಲ್ಲಾರ ನಡುವೆ ಹೈಲೈಟ್ ಆಗಿರೋ ಹೆಸರು ಅಂದ್ರೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್. ಅವರೂ ಕೂಡ ಮೀಸಲು ಕ್ಷೇತ್ರವಾಗಿರೋ ಮೂಡಿಗೆರೆಯ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿ. ಅದಕ್ಕಾಗಿಯೇ ಜನರಿಗೆ ಮುಖ ಪರಿಚಯವಾಗಲಿ ಎಂಬ ಕಾರಣಕ್ಕೆ ಕಳಸಾದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದು ಅಂತಿದ್ದಾರೆ ಪಕ್ಷದ ಎದುರಾಳಿ ಟಿಕೆಟ್ ಆಕಾಂಕ್ಷಿಗಳು. ಹಾಗಾಂತ, ಅವರು ಹೇಳಿದ್ದೆಲ್ಲಾವನ್ನೂ ಒಪ್ಪೋಕೆ ಸಾಧ್ಯವಿಲ್ಲ. ಒಪ್ಪಲೂ ಬಾರದು. ಯಾಕಂದ್ರೆ, ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾದ ಅವರು ಜನರ ಸಮಸ್ಯೆ ಕೇಳೋಕೆ ಕಡೂರಿನಲ್ಲೂ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಆದ್ರೆ, ಮೂಡಿಗೆರೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಉದ್ದೇಶ ಅದೇ ಇದ್ರು ಇರಬಹುದು. ಆದ್ರೆ, ಸ್ಥಳಿಯರಾದ ಕುಮಾರಸ್ವಾಮಿ, ಮೋಟಮ್ಮನವರಿಗೆ ಎಡಗೈನಲ್ಲಿ ಟಾಟಾ ಮಾಡಿರೋ ಮೂಡಿಗೆರೆ ಜನ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾದ ಮೇಲೆ ಮುಖ ನೋಡಿರೋ ಚೈತ್ರಶ್ರೀಯನ್ನ ಹೇಗೆ ಒಪ್ಪಿಕೊಳ್ತಾರೆ ಅಂತಿದ್ದಾರೆ ಮೂಡಿಗೆರೆ ರಾಜಕೀಯ ಪಂಡಿತರು.

ಸರಿಸುಮಾರು 8 ಮಂದಿ ಮೂಡಿಗೆರೆ ಬಿಜೆಪಿ ಟಿಕೆಟ್‍ಗಾಗಿ ಎಂಟು ದಿಕ್ಕಿನಲ್ಲೂ ಒಬ್ಬೊಬ್ಬ ಪ್ರಭಾವಿ ಬಿಜೆಪಿ ಮುಖಂಡನೊಂದಿಗೆ ಒಳರಾಜಕೀಯ ಮಾಡುತ್ತಿರೋದಂತೂ ಸತ್ಯ. ಆದರೆ, ಕೇಳಿ ಬಂದ ಹೆಸರಿನ ಪ್ರತಿಯೊಬ್ಬರಲ್ಲೂ ಒಂದೊಂದು ಮೈನಸ್ ಪಾಯಿಂಟ್ ಇರೋದನ್ನ ಪಕ್ಷದ ಕಾರ್ಯಕರ್ತರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆಯ ಹತ್ತಿರದ ಇಂತಹಾ ಪೀಕ್ ಟೈಂನಲ್ಲಿ ಪಕ್ಷ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಒಂದು ನಿರ್ಣಯ ಕೈಗೊಂಡು ಮೊದಲು ಪಕ್ಷ ಸಂಘಟನೆ ಮಾಡಿ ಎಂದು ಖಡಕ್ ಆದೇಶ ಕೊಡದಿದ್ದರೆ, ಚುನಾವಣೆ ಹೊತ್ತಿಗೆ ಪಕ್ಷ ಮತ್ತಷ್ಟು ಅದೋಗತಿಗಿಳಿದ್ರು ಆಶ್ಚರ್ಯವಿಲ್ಲ. ಒಬ್ಬರಿಗೆ ಟಿಕೆಟ್ ಆದಾಗ ಉಳಿದ ಎಂಟು ಮಂದಿ ಆಕಾಂಕ್ಷಿಗಳು ಹಾಗೂ ಬೆಂಬಲಿತ ಕಾರ್ಯಕರ್ತರು ಪಕ್ಷವಿರೋಧಿ ಚಟುವಟಿಕೆ ಮಾಡೋದು ಹೊಸತೇನಲ್ಲ. ಈ ದೇಶ ಅಂತಾಹ ಚುನಾವಣೆಗಳನ್ನ ಲೆಕ್ಕವಿಲ್ಲದಷ್ಟು ಕಂಡಿದೆ. ಅಭ್ಯರ್ಥಿ ಗೆಲ್ಲೋದಿರ್ಲಿ ಪಕ್ಷದ ಮರ್ಯಾದೆ ಉಳಿಸೋಕಾದ್ರು ಪಕ್ಷದ ವರಿಷ್ಠರು ಮೂಡಿಗೆರೆ ಬಗ್ಗೆ ವಿಶೇಷ ಆಸಕ್ತಿ ವಹಿಸಬೇಕು. ಇಲ್ಲವಾದ್ರೆ, ಮತ್ತೊಮ್ಮೆ ಮಾಜಿ ಸಚಿವೆ ಮೋಟಮ್ಮನವರೋ ಅಥವ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಿ.ಬಿ.ನಿಂಗಯ್ಯನವರೋ ಎಂಎಲ್‍ಎ ಆಗೋದ್ರಲ್ಲಿ ನೋ ಡೌಟ್……

 

LEAVE A REPLY

Please enter your comment!
Please enter your name here