ಕೇಂದ್ರ ಸರ್ಕಾರ ಜನರನ್ನು ಕೈ ಬಿಡಬಹುದು ಆದರೆ ರಾಜ್ಯ ಸರ್ಕಾರ ಕೈ ಬಿಡಲ್ಲ: ಜಯಮಾಲಾ…

224

ಚಿಕ್ಕಮಗಳೂರು : ಕೇಂದ್ರ ಬಜೆಟ್ ಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಜಯಮಾಲಾ ಅವರು ಅಂಗನವಾಡಿ ಕಾರ್ಯಕರ್ತರಿಗೆ ಯಾವುದೇ ಕೊಡುಗೆ ನೀಡಿಲ್ಲ,ಬಜೆಟ್ ನಲ್ಲಿ ಅವರನ್ನು ಮನುಸ್ಯರಾಗಿಯೂ ಸಹ ನೋಡಿಲ್ಲ. ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆ ಇವತ್ತಿನವರೆಗೂ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ.ಕೇವಲ ಅವರನ್ನು ದುಡಿಸಿಕೊಳ್ಳುತ್ತಿದ್ದೇವೆ.ಎ ಲ್ಲಾ ಯೋಜನೆಗಳನ್ನು ಮಾಡಿ ರಾಜ್ಯ ಸರ್ಕಾರದ ಮೇಲೆ ಹೊರೆ ಹೊರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಜನರನ್ನು ಕೈ ಬಿಡಬಹುದು ಆದರೆ ರಾಜ್ಯ ಸರ್ಕಾರ ಕೈ ಬಿಡಲ್ಲ. ಕೇಂದ್ರ ಬಜೆಟ್ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಅಷ್ಟೇ  ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.