ನಾಲ್ಕು ವರ್ಷದಿಂದ ಸುಮ್ಮನಿದ್ದ  ಕೇಂದ್ರ ಸರ್ಕಾರ ಈಗ ಚುನಾವಣಾ ಗಿಮಿಕ್ ಮಾಡ್ತಿದೆ: ಕೃಷ್ಣ ಬೈರೇಗೌಡ… 

256

ಚಿಕ್ಕಮಗಳೂರು : ಕೇಂದ್ರ ಬಜೆಟ್ ಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ  ಅವರು ನಾಲ್ಕು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ರೂ.ಹೆಚ್ಚಳ ಮಾಡಿಲ್ಲ. ಕಾರ್ಯಕರ್ತೆಯರ ಒತ್ತಡದ ಮೇರೆಗೆ ರಾಜ್ಯ ಸರ್ಕಾರ ಶೇ.80  ಸಂಬಳ ಕೊಡುತ್ತಿದೆ. ನಾಲ್ಕು ವರ್ಷದಿಂದ ಸುಮ್ಮನಿದ್ದ  ಕೇಂದ್ರ ಸರ್ಕಾರ ಈಗ ಚುನಾವಣಾ ಗಿಮಿಕ್ ಮಾಡ್ತಿದೆ.ಕರ್ನಾಟಕ ಒಂದರಲ್ಲೇ 40 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇವೆ.ಇಡೀ ದೇಶಕ್ಕೆ ಕೇವಲ 20 ಸಾವಿರ ಕೋಟಿ ಕೊಟ್ಟಿರೋದು ಎಲ್ಲಿಗೆ ಸಾಲುತ್ತೆ. ಕೇಂದ್ರ ಸರ್ಕಾರ ರೈತರನ್ನು ತುಚ್ಚವಾಗಿ ಕಾಣುತ್ತದೆ.ಇಡೀ ದೇಶದ ರೈತರಿಗೆ 6000 ನೀಡಲು  ಕೇವಲ 20 ಸಾವಿರ ಕೋಟಿ ನೀಡಿರುವುದು ಯಾವ ಮೂಲೆಗೆ ಸಾಲುತ್ತೆ ಎಂದು ಕೇಂದ್ರ ಸರ್ಕಾರದ ವಿರುದ್ಧ  ವಾಗ್ದಾಳಿ ನಡೆಸಿದ್ದಾರೆ.