ಕೊರಟಗೆರೆ : ಮುಸ್ಲಿಮರ ಕಷ್ಟಗಳಿಗೆ ಸ್ಪಂದಿಸುವ ಏಕೈಕ ನಾಯಕ ಜಮೀರ್ ಅಹ್ಮದ್ . ಅವರು ಭವಿಷ್ಯದ ಮುಸ್ಲಿಂ ನಾಯಕ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಜಿ.ಪರಮೇಶ್ವರ್ ಜಮೀರ್ ಅಹಮದ್ ರನ್ನ ಹಾಡಿ ಹೊಗಳಿದರು. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಅಕ್ಕಿರಾಂಪುರದಲ್ಲಿ ಉರುಸ್ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಪರಮೇಶ್ವರ್ ಜಮೀರ್ ಅಹಮದ್ ರನ್ನ ಕಾಂಗ್ರೆಸ್ ಗೆ ತರಲು ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ. ಕಳೆದ ಹತ್ತು ವರ್ಷಗಳ ಹಿಂದೆಯೇ ನಾನು ಪ್ರಯತ್ನ ನಡೆಸಿದ್ದೆ. ರಾಹುಲ್ ಗಾಂಧಿಯವರೇ ಜಮೀರ್ ಅಹ್ಮದ್ ರನ್ನ ಸ್ವಾಗತ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಜಮೀರ್ ಅಹ್ಮದ್ ಬೆಳೆದು ನಿಂತಿದ್ದಾರೆ ಎಂದು ಹೇಳಿದ್ದಾರೆ.