ನವದೆಹಲಿ : ಡೊಕ್ಲಾಮ್ ಗಡಿಯಲ್ಲಿ ಚೀನಾ ತನ್ನ ಸೇನೆಯನ್ನ ಹಿಂದಕ್ಕೆ ಕರೆಸಿಕೊಳ್ಳದೆ ಸೈನಿಕರನ್ನ ಅಲ್ಲೇ ನಿಯೋಜಿಸಿ ರಸ್ತೆ ಅಗಲೀಕರಣದಲ್ಲಿ ತೊಡಗಿದ್ದು, ಚೀನಾ ಮತ್ತೆ ತನ್ನ ನರಿ ಬುದ್ಧಿ ಪ್ರದರ್ಶಿಸಿದೆ ಎನ್ನಲಾಗಿದೆ.
ಭಾರತ-ಚೀನಾ ನಡುವೆ ತೀವ್ರ ಘರ್ಷಣೆ ಉಂಟುಮಾಡಿದ್ದ ಡೊಕ್ಲಾಮ್ ಗಡಿ ವಿವಾದ ಅಂತ್ಯಗೊಂಡಿತ್ತು. 2 ತಿಂಗಳ ಬಿಕ್ಕಟ್ಟು ಬಗೆಹರಿದ ಬಳಿಕ ಭಾರತ ಹಾಗೂ ಚೀನಾ ತನ್ನ ಸೇನೆಯನ್ನ ಹಿಂದಕ್ಕೆ ಕರೆಸಿಕೊಳ್ಳಲು ಆಗಸ್ಟ್ 28ರಂದು ನಿರ್ಧರಿಸಿದ್ದವು. ಆದರೀಗ, ಡೊಕ್ಲಾಮ್ ಗಡಿಯಲ್ಲಿ ಚೀನಾ ತನ್ನ ಸೇನೆಯನ್ನ ಅಲ್ಲೇ ಉಳಿಸಿದೆ ಎಂದು ಮೂಲಗಳು ತಿಳಿಸಿವೆ.
ಗಡಿಯಲ್ಲಿ ಚೀನಾ ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನು ಕ್ರಮೇಣ ಹೆಚ್ಚಿಸಿಕೊಳ್ಳುತ್ತಿದೆ. ಸಾಲದಕ್ಕೆ ಭಾರತ ಮತ್ತು ಚೀನಾ ಬಿಕ್ಕಟ್ಟಿಗೆ ಕಾರಣವಾಗಿರೋ ಡೊಕ್ಲಾಮ್ ಗಡಿಯಿಂದ 12 ಕಿ.ಮೀ. ದೂರದ ಗಡಿಯಲ್ಲಿ ಚೀನಾ ರಸ್ತೆ ಅಗಲೀಕರಣ ನಡೆಸುತ್ತಿದೆ, ಇದು ಭಾರತವನ್ನ ಕಳವಳಕ್ಕೀಡು ಮಾಡಿದೆ ಎಂದು ಮೂಲಗಳು ತಿಳಿಸಿವೆ.