ಬೆಂಗಳೂರು : ಜಮೀರ್ ಅಹಮದ್ ನನ್ನ ನಾನು ಲೆಕ್ಕಕ್ಕೆ ಇಟ್ಕೊಂಡಿಲ್ಲ. ಆತ ಆರ್.ವಿ.ದೇವರಾಜ್ ರವರಿಗೆ ಟೋಪಿ ಹಾಕಿದ್ದಾನೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಆತ ಸೀಮೆಎಣ್ಣೆ ಡಬ್ಬ ಹೊತ್ತುಕೊಂಡಿದ್ದ ಗಿರಾಕಿ, ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಜಮೀರ್ ಬಗ್ಗೆ ಏಕವಚನದಲ್ಲಿ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಮಾತನಾಡಿದ ಅವ್ರು, ರಾಜ್ಯ ಕಾಂಗ್ರೆಸ್ ನಲ್ಲಿರೋ ಬಹುತೇಕ ಮುಸ್ಲಿಂ ನಾಯಕರು ದೇವೇಗೌಡರ ಪ್ರಾಡೆಕ್ಟ್ ಎಂದಿದ್ದಾರೆ.
ನಿನ್ನೆ ಹಾಸನದಲ್ಲಿ ಮಾತನಾಡಿರೋ ಹೆಚ್.ಡಿ.ರೇವಣ್ಣ, ಜಮೀರ್ ರನ್ನ ದೇವೇಗೌಡರಿಗೆ ಪರಿಚಯಿಸಿದ್ದೇ ನಾನು. ಕಾಂಗ್ರೆಸ್ ನಲ್ಲಿ ಪ್ರಬಲ ಮುಸ್ಲಿಂ ನಾಯಕರಿಲ್ಲದ ಕಾರಣ, ಪರಮೇಶ್ವರ್ ಜಮೀರ್ ನನ್ನ ಹಾಡಿ ಹೊಗಳುತ್ತಿದ್ದಾರೆ ಅಂತ ವ್ಯಂಗ್ಯವಾಡಿದರು. ಕಾಂಗ್ರೆಸ್ ನಲ್ಲಿ ಮೇವು ಸೊಂಪಾಗಿದ್ದು ಜಮೀರ್ ಅಹಮದ್ ಮೇಯಲು ಹೋಗುತ್ತಿದ್ದಾನೆ ಎಂದು ಹೆಚ್.ಡಿ.ರೇವಣ್ಣ ಏಕವಚನದಲ್ಲಿ ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.