ಚೆನ್ನೈ: ಬಂಗಾಳಕೊಲ್ಲಿಯಲ್ಲಿ ನಿನ್ನೆ ಲಘು ಭೂಕಂಪ ಸಂಭವಿಸಿದ್ದು, ಅದರ ಪರಿಣಾಮ ಚೆನ್ನೈನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ತಡರಾತ್ರಿ 1.30ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಭೂಕಂಪನ ಮಾಪನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ 10 ಕಿ.ಮೀ ಸಮುದ್ರದಾಳದಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನ 4.9ರಷ್ಟು ತೀವ್ರತೆ ದಾಖಲಾಗಿದೆ.










