ವಿರೋಧಿಗಳನ್ನು ಟೀಕಿಸುವ ಭರದಲ್ಲಿ ಅನಿವಾಸಿ ಭಾರತೀಯರನ್ನು ಲೋಫರ್ ಅಂದಾ ಸಚಿವ ಯು.ಟಿ. ಖಾದರ್

442

ಮಂಗಳೂರು: ವಿರೋಧಿಗಳನ್ನು ಟೀಕಿಸುವ ಭರದಲ್ಲಿ ಅನಿವಾಸಿ ಭಾರತೀಯರನ್ನು ಲೋಫರ್ ಅಂತಾ ಸಚಿವ ಯು.ಟಿ. ಖಾದರ್ ಕರೆದಿದ್ದಾರೆ. ಸಚಿವರು ಈ ರೀತಿಯ ಹೇಳಿಕೆ ನೀಡುತ್ತಿದ್ದಂತೆ ಪಕ್ಷದ ಕಾರ್ಯಕರ್ತರೇ ಅವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಮಸೀದಿಯ ಉರುಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವರು, ನಾನು ಹಿಂದೂಗಳ ಕಾರ್ಯಕ್ರಮಗಳಿಗೆ ಹೋದಾಗ ಕೆಲವರು ವಿದೇಶದಲ್ಲಿ ಕುಳಿತುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ಮಾಡ್ತಾರೆ.

ಇಲ್ಲಿ ಡೋಂಗಿ ಮಾಡಿ ವಿದೇಶಕ್ಕೆ ಹೋಗ್ತಾರೆ. ಜನಪ್ರತಿನಿಧಿಯಾಗಿ ಎಲ್ಲಾ ಧರ್ಮದವರ ಕಾರ್ಯಕ್ರಮಕ್ಕೆ ಹೋಗೋದು ನನ್ನ ಧರ್ಮ. ಆ ಲೋಫರ್ ಗಳಿಂದ ನಾನು ಕಲಿಯಬೇಕಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಪಕ್ಷದ ಕಾರ್ಯಕರ್ತರಲ್ಲೇ ಅಸಮಾಧಾನವನ್ನು ಸೃಷ್ಠಿಸಿದ್ದು, ಕಾರ್ಯಕರ್ತರೇ ಖಾದರ್ ಬ್ಯಾನರ್ ಗಳನ್ನು ಹರಿದು ಹಾಕಿದ್ದಾರೆ. ಖಾದರ್ ಚಿತ್ರಕ್ಕೆ ಬ್ಲೇಡ್ ನಿಂದ ಹರಿದು, ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.