ಮೂಡಿಗೆರೆ: ಬೆಳಗೂಡು ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ…

161
firstsuddi

ಮೂಡಿಗೆರೆ: ಅರಣ್ಯ ಇಲಾಖೆಯಿಂದ ಜಮೀನು ಒತ್ತುವರಿ ಹಿನ್ನೆಲೆ ತಾಲೂಕಿನ ಬೆಳಗೂಡು ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸಿದ್ದು, ಅನೇಕ ವರ್ಷಗಳಿಂದ ಕೃಷಿ ನಡೆಸಿದ್ದ ಭೂಮಿಯನ್ನು ಅರಣ್ಯ ಇಲಾಖೆ ಒತ್ತುವರಿ ಮಾಡಿದ್ದು, ಆನೆಹೊಂಡ,ಸೋಲಾರ್ ಬೇಲಿ ನಿರ್ಮಿಸಿ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅರಣ್ಯ ಇಲಾಖೆ ಕ್ರಮಕ್ಕೆ ಬೇಸತ್ತು ಗ್ರಾಮದಲ್ಲಿ ಬ್ಯಾನರ್ ಹಿಡಿದು ಜನರು ಪ್ರತಿಭಟನೆ ಮಾಡುತ್ತಿದ್ದು, ಗ್ರಾಮಕ್ಕೆ ಜನಪ್ರತಿನಿಧಿಗಳು ಕಾಲಿಡದಂತೆ ಆಗ್ರಹಿಸಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರಿಸಿದ್ದಾರೆ.