ವಾಷಿಂಗ್ಟನ್: ಭಾರತದ ರಾಜಕಾರಣಿಗಳಲ್ಲಿ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ವ್ಯಕ್ತಿ ಎಂದು ಇತ್ತೀಚೆಗೆ ನಡೆಸಿದ ಪ್ಯೂ (Peತಿ) ಸಮೀಕ್ಷೆ ಹೇಳಿದೆ. ಫೆಬ್ರವರಿ 21ರಿಂದ ಮಾರ್ಚ್ 10ರ ನಡುವೆ ನಡೆಸಿದ ಸಮೀಕ್ಷೆಯಲ್ಲಿ 2,464 ಜನರು ಭಾಗವಹಿಸಿದ್ದರು. ಮೋದಿಯವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗಿಂತ (58{530ccd75e2fcec17e1c04cab1dd604116093241ff584d1c1efdf19a8030d127f}) 30 ಪಾಯಿಂಟ್ (ಮೋದಿ 88{530ccd75e2fcec17e1c04cab1dd604116093241ff584d1c1efdf19a8030d127f})ಮುಂದಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗಿಂತ(57{530ccd75e2fcec17e1c04cab1dd604116093241ff584d1c1efdf19a8030d127f}) 49 ಪಾಯಿಂಟ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗಿಂತ (39{530ccd75e2fcec17e1c04cab1dd604116093241ff584d1c1efdf19a8030d127f}) ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಭಾರತೀಯ ಆರ್ಥಿಕತೆ ಸುಧಾರಿಸುತ್ತಿರುವುದರಿಂದ ಜನರು ಮೋದಿ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಹತ್ತರಲ್ಲಿ ಎಂಟು ಜನರು 2014ರ ಚುನಾವಣೆ ಬಳಿಕ ಭಾರತದ ಅರ್ಥ ವ್ಯವಸ್ಥೆ ಸುಧಾರಣೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಭಾರತದ ಆರ್ಥಿಕತೆ ಶೇ. 30ರಷ್ಟು ಸುಧಾರಣೆಯಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ 10ರಲ್ಲಿ 7 ಜನರಲ್ಲಿ ಮೋದಿ ಆಡಳಿತದ ಬಗ್ಗೆ ತೃಪ್ತಿ ಇದೆ. 2014ಕ್ಕೆ ಹೋಲಿಸಿದರೆ ಮೋದಿ ಜನಪ್ರಿಯತೆ ದುಪ್ಪಟಾಗಿದೆ ಎಂದು Peತಿ ತಿಳಿಸಿದೆ. ದಕ್ಷಿಣ ಭಾರತದ ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಪಶ್ಚಿಮದಲ್ಲಿ ಮಹಾರಾಷ್ಟ್ರ, ಗುಜರಾತ್, ಚತ್ತೀಸ್ಗಢದಲ್ಲಿ ಮೋದಿ ಜನಪ್ರಿಯತೆ ಹೆಚ್ಚಿದೆ ಎಂದು ಪ್ಯೂ ತಿಳಿಸಿದೆ.