ತುಮಕೂರು: ನವಜಾತ ಹೆಣ್ಣು ಶಿಶುವೊಂದು ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಗದ್ದೆಯಲ್ಲಿ ಪತ್ತೆಯಾಗಿದ್ದು, ಗ್ರಾಮಸ್ಥರೊಬ್ಬರು ಹೊಲದ ಬಳಿ ಹೋಗುತ್ತಿದ್ದಾಗ ಮಗು ಅಳುವ ಶಬ್ದ ಕೇಳಿ ಸ್ಥಳಕ್ಕೆ ತೆರಳಿ ನೋಡಿದಾಗ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ತಕ್ಷಣವೇ ಮಗುವನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ. ನಂತರ ಮಹದೇವಮ್ಮ ಎಂಬ ಮಹಿಳೆ ಮಗುವನ್ನು ಆರೈಕೆ ಮಾಡಿ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರ ಪ್ರಕಾರ ಮಗು ಇಂದು ಬೆಳಿಗ್ಗೆ ಜನಿಸಿರಬಹುದು ಎಂದು ಹೇಳಲಾಗಿದ್ದು, ಮಗುವನ್ನು ಬಿಸಾಡಿ ಹೋಗಿರುವುದರಿಂದ ತೀವ್ರ ಶೀತಕ್ಕೆ ರಕ್ತ ಹೆಪ್ಪುಗಟ್ಟಿದ್ದು, ಮಗುವಿನ ಉಸಿರಾಟದಲ್ಲೂ ತೊಂದರೆ ಆಗಿದೆ ಎಂದು ತಿಳಿದು ಬಂದಿದೆ. ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.










