ಕಳಸ:ಸಮಾಜಮುಖಿ ಕೆಲಸಗಳು ಮಾತ್ರ ನಮ್ಮ ಜೀವನದ ನಂತರವು ಶಾಶ್ವತವಾಗಿ ನೆನಪಿನಲ್ಲಿ ಉಳಿಯಲು ಸಾದ್ಯ ಎಂದು ಕಳಸ ಜೆಸಿಐ ಅಧ್ಯಕ್ಷ ಸಿ.ಚಂದ್ರಪ್ಪ ಹೇಳಿದರು.ಪಟ್ಟಣದ ಮಹಾವೀರ ವೃತ್ತದ ಬಳಿ ಕಳಸ ಜೆಸಿಐ ಸಂಸ್ಥೆಯ ವತಿಯಿಂದ ಅಳವಡಿಸಲಾದ ಸಿಸಿ ಕ್ಯಾಮಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಸಮಾಜ ನಮಗೆಷ್ಟೋ ಕೊಟ್ಟಿದೆ.ಆದರೆ ನಾವು ಸಮಾಜಕ್ಕೆ ನಮ್ಮ ಋಣವನ್ನು ತೀರಿಸಬೇಕಾಗಿದೆ ಜೆಸಿಐ ಯಂತಹ ಸಂಸ್ಥೆಗಳ ಮುಖಾಂತರ ಇಂತಹ ಜನಪರ ಕಾರ್ಯಕ್ರಮಗಳನ್ನು ಮಾಡಿದರೆ ಇದು ಸದಾ ಕಾಲ ಜನ ಮಾನಸದಲ್ಲಿ ಉಳಿಯುತ್ತದೆ.ಮುಂದಿನ ದಿನಗಳಲ್ಲಿ ಕಳಸ ಪೊಲೀಸ್ ಠಾಣೆ ಸಮೀಪ ಮತ್ತು ಮಂಜಿನಕಟ್ಟೆ ಸಮೀಪವು ಸಿಸಿ ಕ್ಯಾಮರಗಳನ್ನು ಅಳವಡಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
ಸಿಸಿ ಕ್ಯಾಮರಾ ಉದ್ಘಾಟಿಸಿ ಮಾತನಾಡಿದ ಜೆಸಿಐ ವಲಯಾಧ್ಯಕ್ಷ ವಿಕಾಸ್ ಗೂಗ್ಲಿಯಾ ಜೆಸಿಐ ಸಂಸ್ಥೆಯ ಮುಖಾಂತರ ಹಲವಾರು ತರಬೇತಿಗಳನ್ನು ನೀಡಲಾಗುತ್ತದೆ.ಈ ತರಬೇತಿಗಳನ್ನು ಸದ್ಭಳಕೆ ಮಾಡಿಕೊಂಡಲ್ಲಿ ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ.ಇದರಿಂದ ಸಮಾಜದಲ್ಲಿ ಗೌರವಯುತವಾಗಿ ಬದುಕಬಹುದು.ಜೆಸಿಐ ಸಂಸ್ಥೆಯಲ್ಲಿ ವ್ಯಕ್ತಿತ್ವ ವಿಕಸನದ ಜೊತೆ ಹಲವಾರು ಸಾಮಾಜಿಕ ಕೆಲಸಗಳನ್ನು ಮಾಡಿ ಸಮಾಜಕ್ಕೆ ಮಾದರಿಯಾಗಿ ಇರಬಹುದು ಎಂದು ಹೇಳಬಹುದು.
ಕಳಸ ಎ ಎಸ್ ಐ ನಂಜಪ್ಪ ಮಾತನಾಡಿ ಮಹವೀರ ವೃತ್ತದ ಬಳಿ ಅಗತ್ಯವಾಗಿ ಬೇಕಾಗಿದ್ದ ಸಿಸಿ ಕ್ಯಾಮರವನ್ನು ಜೆಸಿಐ ಸಂಸ್ಥೆಯು ಕೊಡುಗೆ ನೀಡಿದ್ದು ಶ್ಲಾಘನೀಯ.ಇದರಿಂದ ಅಪರಾದ ನಡೆದಾಗ ಅದನ್ನು ಅತಿ ಸುಲಭವಾಗಿ ಪತ್ತೆ ಹಚ್ಚಲು ಸಾದ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷೆ ಸಮತಾ ಮಿಸ್ಕಿತ್,ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ್ ಕುಮಾರ್,ಸದಸ್ಯರಾದ ರಂಗನಾಥ್,ಪಂಚಾಯಿತಿ ಕಾರ್ಯದರ್ಶಿ ಸಂತೋಷ್,ಜೆಸಿಐಯ ವಲಯ ಕಾರ್ಯದರ್ಶಿ ಶ್ರೇಣಿಕ್,ಪೂರ್ವಧ್ಯಕ್ಷ ಸುದೀಶ್ ಸುವರ್ಣ, ಸುರೇಂದ್ರ, ವಿಜಯಕುಮಾರ್,ಸಂತೋಷ್ ಗೋಣಿಬೀಡು,ತೇಜಸ್ ಜೈನ್,ರಾಮಪ್ರಕಾಶ್,ಮಹೇಶ್,ಅಶೋಕ್,ಮಂಜುನಾಥ್,ಗೌರವ್ ಜೈನ್ ಇತರರು ಇದ್ದರು.
Home ಸ್ಥಳಿಯ ಸುದ್ದಿ ಸಮಾಜಮುಖಿ ಕೆಲಸಗಳು ಮಾತ್ರ ನಮ್ಮ ಜೀವನದ ನಂತರವು ಶಾಶ್ವತವಾಗಿ ನೆನಪಿನಲ್ಲಿ ಉಳಿಯಲು ಸಾಧ್ಯ .- ಕಳಸ...