ಮಂಗಳೂರು- ಕಳೆದ ಬಾರಿ ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಜೂನ್ 20ರಂದು ಸಾಲ ಹೊರಬಾಕಿ ಇದ್ದ ರೈತರಿಗೆ ಮಾತ್ರ ಸಾಲಮನ್ನಾ ಮಾಡುವಂತೆ ಆದೇಶ ಮಾಡಿದ್ದು ಆದರೆ ಜೂನ್ ತಿಂಗಳು ರೈತರ ಸಾಲ ಮರುಪಾವತಿಯ ಸಮಯವಾಗಿದ್ದು ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡದಿದ್ದರೆ 12% ಬಡ್ಡಿ ಕಟ್ಟಬೇಕಾಗುತ್ತದೆ ಎಂದು ಬಹಳಷ್ಟು ರೈತರು ಸಾಲದ ಹಣವನ್ನು ಚಿನ್ನ ಅಡವಿಟ್ಟು ಹಾಗೂ ಕೈ ಸಾಲ ಪಡೆದು ಬ್ಯಾಂಕಿಗೆ ಮರುಪಾವತಿ ಮಾಡಿರುತ್ತಾರೆ. ಆದರೆ ಮತ್ತೆ ಹೊಸ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದು ಹೊಸ ಸಾಲಕ್ಕೆ ಒಂದು ವಾರ ಕಾಲಾವಕಾಶ ತಗಲುವುದರಿಂದ ಅರ್ಜಿ ಸಲ್ಲಿಸಿದ ರೈತರಿಗೆ ಜೂನ್ 20ರ ಒಳಗೆ ಹೊಸ ಸಾಲ ದೊರಕಿರುವುದಿಲ್ಲ. ಜೂನ್ 20ರಂದು ರೈತರ ಸಾಲದ ಹೊರಬಾಕಿ ಇಲ್ಲದ ಕಾರಣ ನೀಡಿದ್ದರಿಂದ ಸಾಲಭಾಗ್ಯದಿಂದ ಹಲವು ರೈತರು ವಂಚಿತರಾಗಿದ್ದಾರೆ. ಈ ಬಾರಿಯೂ ಸಾಕಷ್ಟು ರೈತರು ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದ್ದಾರೆ. ಕಳೆದ ಬಾರಿ ಸಾಲ ಮನ್ನಾ ದೊರೆಯದ ರೈತರಿಗೆ ಈ ಬಾರಿ ಸಾಲಮನ್ನಾ ಮಾಡಬೇಕಾಗಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಸೇವಾ ಸಹಕಾರಿ ಸಂಘ ಅಧ್ಯಕ್ಷರಾದ ಪದ್ಮಪ್ರಸಾದ್ ಜೈನ್ ಅವರು ಪತ್ರಬರೆದು ಮನವಿ ಸಲ್ಲಿಸಿದ್ದಾರೆ.