ಹಾಸನ : ನಗರದ ಅಧಿದೇವಿ ಹಾಸನಾಂಬೆ ದರ್ಶನ ಮಹೋತ್ಸವ ಅಕ್ಟೋಬರ್ 12ರಿಂದ ಪ್ರಾರಂಭವಾಗಲಿದ್ದು ಜಿಲ್ಲಾಡಳಿತ ಸಕಲ ಸಿದಧತೆಗಳನನು ಕೈಗೊಳ್ಳುತ್ತಿದೆ. ಜಿಲ್ಲಾಡಳಿತ ಸಕಲ ಸಿಧತೆಗಳನ್ನು ಕೈಗೊಳ್ಳುತ್ತಿದೆ. ಇದರ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಉಪವಿಭಾಗಾಧಿಕಾರಿ ಡಾ:ಹೆಚ್.ಎಲ್. ನಾಗರಾಜ್ ಅವರು ತಿಳಿಸಿದ್ದಾರೆ.
ಹಾಸನಾಂಬೆ ದೇವಾಲಯದ ಬಳಿ ಸಿದ್ಧತೆ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಕ್ಟೋಬರ್ 12ರಿಂದ 21ರವರೆಗೆ ಹಾಸನಾಂಬದೇವಿ ಬಾಗಿಲು ತೆರೆದಿರುತ್ತದೆ. ಆದರೆ ಬಾಗಿಲು ತೆರೆಯುವ ಅಕ್ಟೋಬರ್ 12ರಿಂದ ಹಾಗೂ ಬಾಗಿಲು ಮುಚ್ಚುವ ದಿನವಾದ ಅಕ್ಟೋಬರ್ 2ರಂದು ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುವುದಿಲ್ಲ ಎಂದು ಹೇಳಿದರು.
ಈ ಬಾರಿ ಹೆಚ್ಚಿನ ಪಾಸ್‍ಗಳ ವಿತರಣೆ ಇರುವುದಿಲ್ಲ. ಪೂಜಾ ಅವಧಿಯನ್ನು ಕಡಿಮೆಗೊಳಿಸಲಾಗಿದ್ದು ಅತಿ ಗಣ್ಯರ ಹಾಸನಾಂಬ ದರ್ಶನದ ವೇಳೆ ಹೆಚ್ಚವಿನ ಕಾಲ ವೈಯವಾಗದಂತೆ ವ್ಯವಸ್ಥೆ ಮಾಡಲಾಗಹಿದೆ. ಅತಿ ಗಣ್ಯರೂ ಜನಪ್ರತಿನಿಧಿಗಳು, ಭಕ್ತಾಧಿಗಳು ಸಹಕರಿಸಬೇಕು ಎಂದು ಉಪವಿಭಾಗಾಧಿಕಾರಿಯವರು ಮನವಿ ಮಾಡಿದರು.
ಈ ಬಾರಿ ಭಕ್ತಾದಿಗಳಿಗೆ ಪ್ರಸಾದವನ್ನು ಹಾಸನಾಂಬ ದೇವಾಲಯದಿಂದ 200 ಮೀಟರ್ ದೂರದಲ್ಲಿರುವ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ವಿತರಿಸಲಾಗುವುದು. ತುರ್ತು ದರ್ಶನ ಬಯಸುವವರು ವಿಶೇಷ ದರ್ಶನದ ಪಾಸ್ ಪಡೆದು ದೇವರ ಆಶೀರ್ವಾದ ಪಡೆಯಬಹುದು ಎಂದು ಅವರು ಹೇಳಿದರು.
ತಹಸೀಲ್ದಾರ್ ಶಿವಶಂಕರ್, ಮುಜರಾಯಿ ತಹಸೀಲ್ದಾರ್ ವಿದ್ಯುಲತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಾದ ಶ್ರೀಕಂಠಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಹಾಸನಾಂಬ ದೇವಿಯನ್ನು ಭಕ್ತರು ವರ್ಷದ ಎಲ್ಲಾ ಕಾಲದಲ್ಲೂ ದರ್ಶನ ಮಾಡಲು ಸಾಧ್ಯವಿರುವುದಿಲ್ಲ. ವರ್ಷಕ್ಕೊಂದು ಬಾರಿ ಆಶ್ವಯುಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರದಂದು ಬಾಗಿಲು ತೆರೆದರೆ ಅನಂತರ ಬಲಿಪಾಡ್ಯಮಿ ಮಾರನೇ ದಿನ ಬಾಗಿಲು ಮುಚ್ಚುವುದು. ಪುನಃ ಇಂದು ವರ್ಷದ ಕಾಲ ದೇವಿಯ ದರ್ಶನ ದೊರೆಯುವುದಿಲ್ಲ. ಹಾಸನಾಂಬ ದೇವಿಯ ವಿಶೇಷವೆಂದರೆ ದೇವಾಲಯದ ಬಾಗಿಲು ಮುಚ್ಚುವ ದಿವಸ ಹಚ್ಚಿದ ದೀಪವು ನಂದದೇ ಹಾಗೂ ಅಲಂಕರಿಸಿದ ಪುಷ್ಪಗಳು ಮುಂದಿನ ವಿಶ್ವಪ್ರಖ್ಯಾತವಾಗಿರುತ್ತದೆ.