ಚಿಕ್ಕಮಗಳೂರು ಆ.2 ರಸ್ತೆ ಅಗಲೀಕರಣದ ವೇಳೆ ಒಡೆದಿರುವ ತಮ್ಮ ಕಟ್ಟಡಗಳಿಗೆ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಸೂಕ್ತ ಪರಿಹಾರ ನೀಡುವಂತೆ ಐ.ಜಿ ಮತ್ತು ಕೆ.ಎಂ. ರಸ್ತೆಯ ಕಟ್ಟಡಗಳ ಮಾಲೀಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಐ.ಜಿ ಮತ್ತು ಕೆ.ಎಂ.ರಸ್ತೆ ಕಟ್ಟಡ ಮಾಲೀಕರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರನ್ನು ಗುರುವಾರ ಭೇಟಿ ಮಾಡಿದ ಮಾಲೀಕರು ಈ ಸಂಬಂಧ ಮನವಿ ಸಲ್ಲಿಸಿದರು.
2010-11 ರಲ್ಲಿ ರಸ್ತೆ ಅಗಲೀಕರಣದ ವೇಳೆ ನಮ್ಮ ಕಟ್ಟಡಗಳಿಗೆ ಸೂಕ್ತ ಪರಿಹಾರ ನೀಡಿ ಒಡೆಯಲು ನಿರ್ದೇಶಿಸುವಂತೆ ಕೋರಿ ನಾವುಗಳು ರಾಜ್ಯ ಉಚ್ಚನ್ಯಾಯಾಲಯದ ಮೆಟ್ಟಿಲೇರಿದ್ದೆವು, ಆ ಸಂದರ್ಭದಲ್ಲಿ ನಮ್ಮೊಂದಿಗೆ ಮಾತುಕತೆ ನಡೆಸಿದ ಅಂದಿನ ಜಿಲ್ಲಾಧಿಕಾರಿ ಚನ್ನಪ್ಪಗೌಡ ಅವರು ಪರಿಹಾರ ನೀಡುವ ಭರವಸೆ ನೀಡಿದ್ದರು ಎಂದು ತಿಳಿಸಿದರು.
ಪರಿಹಾರದ ಭರವಸೆ ದೊರೆತ ಹಿನ್ನೆಲೆಯಲ್ಲಿ ನಮ್ಮ ಕಟ್ಟಡಗಳನ್ನು ಒಡೆಯಲು ಅನುಮತಿ ನೀಡಿದ್ದೆವು ಆದರೆ ಕಟ್ಟಡಗಳನ್ನು ಒಡೆದ ನಂತರ ಯಾವುದೇ ಪರಿಹಾರ ಬಾರದ ಹಿನ್ನೆಲೆಯಲ್ಲಿ ಪರಿಹಾರಕ್ಕಾಗಿ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದೆವು ಎಂದು ಹೇಳಿದರು. ಇದೀಗ ಕಟ್ಟಡ ಮಾಲೀಕರಿಗೆ ಸೂಕ್ತ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿರುವ ಹಿನ್ನೆಲೆಯಲ್ಲಿ ತಮಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ನ್ಯಾಯಾಲಯದ ಆದೇಶದ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ನಂತರ ಪರಿಶೀಲಿಸಿ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಐ.ಜಿ ಮತ್ತು ಕೆ.ಎಂ. ರಸ್ತೆ ಕಟ್ಟಡಗಳ ಮಾಲೀಕರ ಸಂಘದ ಉಪಾಧ್ಯಕ್ಷ ಸಿ.ಎಸ್.ದಯಾನಂದ ನಾಯ್ಡು, ಪ್ರಧಾನ ಕಾರ್ಯದರ್ಶಿ ಎನ್.ಎಸ್.ಜಗದೀಶಾಚಾರ್, ಸಹಕಾರ್ಯದರ್ಶಿ ಸುಧೀರ್, ಕಟ್ಟಡ ಮಾಲೀಕರಾದ ಎಂ.ಆರ್.ಶ್ರೀಧರ್, ಮೆಟೆಲ್ಡಾ ಡಿಸೋಜಾó, ಕೆ.ಎಸ್.ಗೋಪಾಲಕೃಷ್ಣಶೆಟ್ಟಿ, ಜೈ ಚಂದಲಾಲ್ ಜೈನ್, ಶಾಂತಿಲಾಲ್ ಜೈನ್ ಹಾಜರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು ಐ.ಜಿ ಮತ್ತು ಕೆ.ಎಂ. ರಸ್ತೆ ಅಗಲೀಕರಣದ ವೇಳೆ ಒಡೆದಿರುವ ತಮ್ಮ ಕಟ್ಟಡಗಳಿಗೆ ಸೂಕ್ತ...