ಜೀವ ನದಿ ಲಕ್ಷ್ಮಣತಿರ್ಥ ಪುನಶ್ಚೇತನಕ್ಕೆ 36 ಕೋಟಿ ರೂ. ವಿಶೇಷ ಅನುದಾನ ಯೋಜನೆ

529

ಹುಣಸೂರು: ನಗರದ ಜೀವ ನದಿ ಲಕ್ಷ್ಮಣತಿರ್ಥಕ್ಕೆ ಕೊಳಚೆ ನೀರು ನದಿ ಸೇರುತ್ತಿದ್ದು. ಇದನ್ನು ತಡೆಗಟ್ಟಲು 36 ಕೋಟಿ ರೂ.ಗಳ ಅನುದಾನದಲ್ಲಿ ವಿಶೇಷ ಯೋಜನೆಯನ್ನು ರೂಪಿಸಲಾಗಿದೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ತಿಳಿಸಿದರು. ನಗರದ ಪಂಪ್ ಹೌಸ್ ಬಳಿ ಲಕ್ಷ್ಮಣತಿರ್ಥ ನದಿಗೆ ಅಡ್ದಲಾಗಿ ಕಟ್ಟಲಾಗಿರುವ ಕಟ್ಟೆಯನ್ನು ಎರಡು ಅಡಿ ಎತ್ತರಿಸುವ ಮೂಲಕ ನದಿ ನೀರನ್ನು ಸಂಗ್ರಹಿಸಲಾಗುವುದು ಹಾಗೂ ನದಿಯ ಎರಡು ಕಡೆಗಳಲ್ಲಿ ಚರಂಡಿ ನಿರ್ಮಿಸಿ ನಗರ ಪ್ರದೇಶದಿಂದ ನದಿಗೆ ಸೇರುತ್ತಿದ್ದ ಕೊಳಚೆ ನೀರನ್ನು ಚರಂಡಿಯಲ್ಲಿ ಮುಂದಕ್ಕೆ ಹರಿಸಿ ಅಲ್ಲಿ ನೀರನ್ನು ಸಂಸ್ಕರಣೆ ಮಾಡಿ ಯೋಗ್ಯವಾದರೆ ನದಿಗೆ ಬೀಡಲಾಗುವುದು ಇಲ್ಲದಿದ್ದರೆ ಜಮೀನುಗಳಿಗೆ ಹರಿಸಲಾಗುವುದು ಎಂದರು.

ಈ ಕಾಮಗಾರಿಯನ್ನು ನಿರ್ವಹಿಸಲು ನದಿ ಎಲ್ಲೆಯನ್ನು ಗುರುತಿಸಲು ಸರ್ವೆ ಇಲಾಖೆ, ಕಂದಾಯ ಇಲಾಖೆ ಸ್ವಚ್ಛ ಕಾರ್ಯಕ್ಕಾಗಿ ಪೌರ ಸೇವಾಇಲಾಖೆ ಸೇರಿ ಮೂರು ಇಲಾಖೆಗಳು ಸೇರಿ ಈ ಕೆಲಸ ನಿರ್ವಹಿಸಲಿದ್ದು, ಮುಂದಿನ ಹತ್ತು ದಿನದಲ್ಲಿ ಗಡಿ ಗುರುತಿಸುವಿಕೆ ಮತ್ತು ಸ್ವಚ್ಛತಾ ಕಾರ್ಯ ಮುಗಿಯಲಿದೆ. ನಂತರ ಕಾವೇರಿ ನಿರಾವರಿ ನಿಗಮದಿಂದ ಕಾಮಗಾರಿ ನಡೆಯಲಿದೆ ಇದು ಹುಣಸುರಿನ ಜನತೆಗೆ ಶಾಸ್ವತ ಕಾರ್ಯವಾಗಲಿದೆ ಎಂದರು.ತಾಹಸಿಲ್ದಾರ್ ಮೋಹನ್ ಕುಮಾರ್, ತ.ಪಂ ಕಾರ್ಯನಿರ್ವಹಣಧಿಕಾರಿ ನಗರಾಬಿವೃದ್ದಿ ಪ್ರಾಧಿಕಾರದ ಅದ್ಯಕ್ಷ ಎಂ.ರವಿಶಂಕರ್, ನಗರ ಸಭಾ ಪೌರಾಯುಕ್ತ ಶಿವಪ್ಪನಾಯಕ, ನಗರ ಸಭಾ ಅದ್ಯಕ್ಷ ಕೆ.ಲಕ್ಷ್ಮಣ್, ಸದಸ್ಯರಾದ ಜಾಕಿರ್, ದೇವಿ, ಅಜಗರ್, ಪರಿಸರ ಇಂಜಿನಿಯರ್ ರವಿಕುಮಾರ್, ಸದಾಶಿವಪ, ಸರ್ವೆಯರ್ ಶರ್ಮ, ಎಇಇ ಕುಶುಕುಮಾರ್, ನರಸೆಗೌಡ ಉಪಸ್ಥಿತರಿದ್ದರು.