ಹಾಸನ : ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಹಾಸನದ ವಿಜಯ ಸ್ಕೂಲ್ ಟೀಮ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಕ್ಯಾಪ್ಟನ್ ಭೂಮಿಕಾ ಎಸ್ ತಗಡೂರು ನೇತೃತ್ವದ ತಂಡ ಮತ್ತು ಬಾಲಕರ ವಿಭಾಗದಲ್ಲಿ ಕ್ಯಾಪ್ಟನ್ ವರುಣ್ ಗೌಡ ನೇತೃತ್ವದ ತಂಡ ಬೆಂಗಳೂರು ಉತ್ತರ ತಂಡವನ್ನು ಮಣಿಸಿ ಚಾಂಪಿಯನ್ ಆಗಿದೆ.
14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಕ್ಯಾಪ್ಟನ್ ಮಾನ್ಯ ಡಿ.ಕೆ ನೇತೃತ್ವದ ತಂಡ ಮತ್ತು ಬಾಲಕರ ವಿಭಾಗದಲ್ಲಿ ಕ್ಯಾಪ್ಟನ್ ಕರುಣ್ ನೇತೃತ್ವದ ತಂಡ ಬೆಂಗಳೂರು ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಂದ್ಯಾವಳಿಯಲ್ಲಿ 4 ವಿಭಾಗದಿಂದ 60 ತಂಡಗಳು ಭಾಗವಹಿಸಿದ್ದವು, ನಾಲ್ಕು ತಂಡಗಳು ಹಾಸನದ ವಿಜಯ ಸ್ಕೂಲ್ ತಂಡಗಳಾಗಿದ್ದು, ದೈಹಿಕ ಶಿಕ್ಷಕ ಪುರುಷೋತ್ತಮ್ ತರಬೇತುದಾರರಾಗಿದ್ದಾರೆ.