ಗುಜರಾತ್ : ಜಿಎಸ್‌ಟಿ ಕಾಯ್ದೆ ಜಾರಿಗೆ ಬಂದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ್ದೂ ಕೂಡ ಸಮಪಾಲಿದೆ ಎಂದು ಪ್ರದಾನಿ ಮೋದಿ ಹೇಳಿದ್ದಾರೆ. ವರ್ಷಾಂತ್ಯದಲ್ಲಿ ಗುಜರಾತ್ನಲ್ಲಿ ನಡೆಯೋ ಚುನಾವಣೆಯ ಭಾಗವಾಗಿ ಭಟ್ ಗ್ರಾಮದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮೋದಿ ಮಾತನಾಡಿದರು. ಜಿಎಸ್ಟಿ ಕಾಯ್ದೆ ಜಾರಿಯಲ್ಲಿ ಕೇಂದ್ರ ಸರ್ಕಾರದ ಪಾತ್ರ ಸಣ್ಣದು. ಈ ವಿಚಾರದಲ್ಲಿ ಹಲವು ರಾಜ್ಯ ಸರ್ಕಾರಗಳ ಒಮ್ಮತದೊಂದಿಗೆ ಕೇಂದ್ರದ ಸಾಮೂಹಿಕ ನಿರ್ಧಾರವಾಗಿತ್ತು ಎಂದಿದ್ದಾರೆ.
ಜಿಎಸ್ ಟಿ ಕಾಯ್ದೆ ಜಾರಿಗೆ ಬಂದಿರೋದ್ರಲ್ಲಿ ಕಾಂಗ್ರೆಸ್ ಪಾತ್ರವೂ ಸಮಾನಾಗಿದೆ, ಈ ವಿಷಯದಲ್ಲಿ ಕಾಂಗ್ರೆಸ್ ಸುಳ್ಳು ಹೇಳಬಾರದು ಎಂದಿದ್ದಾರೆ. ಇದು ಎಲ್ಲಾ ಪಕ್ಷಗಳು ಹಾಗೂ ಸರ್ಕಾರದ ಸಂಘಟಿತ ನಿರ್ಧಾರ. ಕರ್ನಾಟಕ, ಪಂಜಾಬ್ ಹಾಗೂ ಮೇಘಾಲಯದಲ್ಲಿನ ಕಾಂಗ್ರೆಸ್ ಸರ್ಕಾರದ ಪಾತ್ರವೂ ಇದೆ. ಜಿಎಸ್ಟಿ ನಿರ್ಧಾರವನ್ನ ಸಂಸತ್ ಅಥವಾ ನರೇಂದ್ರ ಮೋದಿ ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
29 ರಾಜ್ಯಗಳ ಜೊತೆ ಚರ್ಚಿಸಿದ ಬಳಿಕವೇ ಜಿಎಸ್ಟಿ ಜಾರಿಗೆ ಬಂದದ್ದು. ಇದರಲ್ಲಿ ಕೇಂದ್ರದ್ದು 30ನೇ ಭಾಗವಾಗಿತ್ತು ಎಂದಿದ್ದಾರೆ. ಉದ್ಯಮಿಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಜಿಎಸ್ ಟಿ ಜಾರಿಯಾದ ಮೇಲೆ ಅವರು ಜಿಎಸ್ಟಿಯನ್ನ ಇಷ್ಟ ಪಟ್ಟಿದ್ದಾರೆ ಎಂದು ಹೇಳಿದ್ದಾರೆ.