ಚಿಕ್ಕಮಗಳೂರಿನ ದೇವಿರಮ್ಮನ ದೇವಾಲಯದಲ್ಲಿ ಎರಡನೇ ದಿನ ನಡೆಯಿತು ಪವಾಡ ! ಏನಾಯ್ತು ಗೊತ್ತಾ ?

11711

ಚಿಕ್ಕಮಗಳೂರು : ವರ್ಷದ 364 ದಿನ ಗರ್ಭಗುಡಿಯಲ್ಲಿ ದರ್ಶನ ನೀಡೋ ದೇವಿರಮ್ಮ, ತನ್ನನ್ನ ನೋಡಲು ಬೆಟ್ಟ ಹತ್ತಿ ಬರೋ ಭಕ್ತರಿಗೆ ದರ್ಶನ ನೀಡಲೆಂದೇ ದೀಪಾವಳಿ ಅಮಾವಸೆಯ ಹಿಂದಿನ ರಾತ್ರಿ ಬೆಟ್ಟದಲ್ಲಿ ನೆಲೆಸಿರ್ತಾಳೆ. ವರ್ಷದ ಒಂದು ದಿನ ಬೆಟ್ಟದಲ್ಲಿ ದರ್ಶನ ನೀಡೋ ದೇವಿ ಇಂದು ಬೆಟ್ಟವನ್ನಿಳಿದು ಗರ್ಭಗುಡಿ ಪ್ರವೇಶಿಸ್ತಾಳೆ ಅನ್ನೋ ನಂಬಿಕೆಗೆ 800 ವರ್ಷಗಳ ಇತಿಹಾಸವಿದೆ. 3000 ಅಡಿ ಎತ್ತರದಲ್ಲಿರೋ ಬೆಟ್ಟವನ್ನಿಳಿದು ಬಂದು ಗರ್ಭಗುಡಿ ಪ್ರವೇಶಿಸೋ ಈ ತಾಯಿಯನ್ನ ನೋಡಲು ಭಕ್ತಸಮೂಹವೇ ಕಾದುಕೂತಿತ್ತು. ಆ ಬೆಟ್ಟದ ತಾಯಿ ಗರ್ಭಗುಡಿ ಪ್ರವೇಶಿಸೋದ್ನ ಕಂಡ ಭಕ್ತಸಮೂಹ ನಾವೇ ಧನ್ಯರೆಂದ್ರು.

ಚಿಕ್ಕಮಗಳೂರಿನ ಬಿಂಡಿಗ ಮಲ್ಲೇನಹಳ್ಳಿ ದೇವಿರಮ್ಮನ ದೇವಾಲಯಕ್ಕೆ ಕಳೆದೆರಡು ದಿನಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ಬೆಟ್ಟ ಹತ್ತೋ ಭಕ್ತರಿಗೆ ದರ್ಶನ ನೀಡಲೆಂದೇ ಅಮಾವಸೆಯ ಹಿಂದಿನ ರಾತ್ರಿ ಬೆಟ್ಟದಲ್ಲಿ ನೆಲೆಸೋ ತಾಯಿ, ಇಂದು ಗರ್ಭಗುಡಿ ಪ್ರವೇಶಿಸ್ತಾಳೆ. ಈ ವೇಳೆ, ಗರ್ಭಗುಡಿಯ ಪರದೆ ತಾನಾಗೇ ತೆರೆದುಕೊಳ್ಳುತ್ತೆಂಬುದು ಭಕ್ತರ ನಂಬಿಕೆಗೆ ಎಂಟು ದಶಕಗಳ ಇತಿಹಾಸವಿದೆ. ಈ ಸುಮಧುರ ಘಳಿಗೆಯ ಕೌತುಕವನ್ನ ನೋಡಲು, ಭಕ್ತರ ದಂಡೇ ಹರಿದು ಬರುತ್ತೆ. ಅದರಂತೆ 09.45ರ ಸುಮಾರಿಗೆ ದೇವಾಲಯದ ಗರ್ಭಗುಡಿಯ ಬಾಗಿಲಿಗೆ ಹಾಕಿದ್ದ ಪರದೆಯು ಓರ್ವ ವ್ಯಕ್ತಿ ಒಳ ಹೋಗುವಷ್ಟು ಸರಿದದ್ದನ್ನ ಕಂಡ ಭಕ್ತರು ದೇವಿಯೇ ಗರ್ಭಗುಡಿಯ ಒಳಹೊಕ್ಕಳೆಂದು ಸಂಭ್ರಮಿಸಿದ್ರು. ವಾದ್ಯಗೋಷ್ಠಿ, ಅಷ್ಟದಿಕ್ಕುಗಳ ಪೂಜೆಯ ಬಳಿಕ 9 ಕಿ.ಮೀ. ಬೆಟ್ಟದ ಮೇಲಿರೋ ದೇವಿ ಕೆಳಗಿರೋ ದೇವಾಲಯವನ್ನು ಪ್ರವೇಶಿಸುತ್ತಾಳೆಂಬುದು ಭಕ್ತರ ನಂಬಿಕೆ.

ಆಧುನಿಕ ಕಾಲದಲ್ಲೂ ದೇವಾಲಯದ ಬಾಗಿಲಿನ ಪರದೆ ತಾನಾಗೇ ತೆರೆದುಕೊಳ್ಳೋದು ನೋಡುಗರಲ್ಲಿ ಕುತೂಹಲ ಮೂಡಿಸಿದ್ರೆ, ಪ್ರಜ್ಞಾವಂತರಲ್ಲಿ ಸಂಶಯ  ಹುಟ್ಟಾಕಿದೆ. ಆದ್ರೆ, ಈ ದೇವಿಯ ಶಕ್ತಿ ಅಪಾರ ಅನ್ನೋದು ಭಕ್ತರ ನಂಬಿಕೆ. ಹರಕೆ ಕಟ್ಟಿಕೊಂಡ್ರೆ ಎಂತಹಾ ಸಮಸ್ಯೆ ಕೂಡ ಮುಂದಿನ ವರ್ಷದೊಳಗೆ ಈಡೇರುತ್ತೆ ಅನ್ನೋದು ಅಸಂಖ್ಯಾತ ಭಕ್ತರ ನಂಬಿಕೆ. ಪ್ರತಿವರ್ಷ ಸಾವಿರಾರು ಭಕ್ತರು ಈ ಮೂರು ದಿನ ಬಂದು ಹರಕೆ ತೀರಿಸುತ್ತಾರೆ. ಈ ವರ್ಷ 3000 ಅಡಿಗೂ ಎತ್ತರದಲ್ಲಿರೋ ದೇವಿಯನ್ನ 80 ಸಾವಿರಕ್ಕೂ ಅಧಿಕ ಜನ ಬರಿಗಾಲಲ್ಲೇ ಹತ್ತಿ ಆಕೆಯ ದರ್ಶನ ಪಡೆದು ಪುನೀತರಾದ್ರು. ದೀಪಾವಳಿಯ ಬೆಳಗಿನ ಜಾವ ದೇವಾಲಯದ ಆವರಣದಲ್ಲಿ ಕೆಂಡ ತುಳಿಯೋ ಮೂಲಕವೂ ನೂರಾರು ಭಕ್ತರು ಹರಕೆ ತೀರಿಸ್ತಾರೆ. ನಿನ್ನೆ ಹಾಗೂ ಇಂದು ಭಕ್ತರು ತಂದ ಬಟ್ಟೆ, ಬೆಣ್ಣೆ, ತುಪ್ಪವನ್ನ ದೇವಾಲಯದ ಮುಂಭಾಗ ಸುಟ್ಟು ಅದನ್ನ ಭಕ್ತರಿಗೆ ಭಸ್ಮವಾಗಿ ನೀಡ್ತಾರೆ.

 

LEAVE A REPLY

Please enter your comment!
Please enter your name here