ತಾಯಿಯನ್ನು ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ…

180
firstsuddi

ಮೈಸೂರು:  ತಾಯಿಯನ್ನು ಕೊಲೆ ಮಾಡಿದ್ದ ಆರೋಪಿಗೆ  ಮೈಸೂರು ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.2017ರಲ್ಲಿ ಸುಂದರಂ ಎಂಬಾತ ಮದ್ಯ ಸೇವನೆಗೆ ತನ್ನ ತಾಯಿ ಗೋವಿಂದಮ್ಮ  ಬಳಿ ಹಣವನ್ನು ಕೇಳಿದ್ದು, ತಾಯಿ ಹಣ ಕೊಡದಿದ್ದಕ್ಕೆ, ಅವರ  ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದು, ಈ ಬಗ್ಗೆ  ಕೆ.ಆರ್ ಠಾಣೆ ಪೊಲೀಸರು ಪ್ರಕಣವನ್ನು ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ  ದೋಷಾರೋಪಣಾ  ಪಟ್ಟಿ ಸಲ್ಲಿಸಿದರು. ಪ್ರಕರಣದ ಕುರಿತು ವಿಚಾರಣೆ ನಡೆಸಿದ  ಮೈಸೂರಿನ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ  ನ್ಯಾಯಾಧೀಶರು   ಆರೋಪಿ ಸುಂದರಂಗೆ ಜೀವಾವಧಿ ಶಿಕ್ಷೆ ಮತ್ತು ದಂಡ  ವಿಧಿಸಿದೆ ಎಂದು ತಿಳಿದು ಬಂದಿದೆ.