ಚಿಕ್ಕಮಗಳೂರು : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ೧ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ. ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯ ವಾಸಿ ಅಣ್ಣಪ್ಪ ಎಂಬುವನು ತನ್ನ ಮಗಳನ್ನು ಸಾಗರದಿಂದ ಕರೆತಂದು ಕಾಫೀ ತೋಟದಲ್ಲಿ ಇಟ್ಟುಕೊಂಡು ಅತ್ಯಾಚಾರವೆಸಗಿರುವ ಹಿನ್ನೆಲೆ ಬಾಳೂರು ಪೋಲಿಸ್ ಠಾಣೆಯವರು ಪ್ರಕರಣವನ್ನು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ೧ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಡಿ.ಕಂಬೇಗೌಡ ಅವರು ಆರೋಪಿ ಅಣ್ಣಪ್ಪನಿಗೆ ಅಪರಾಧಕ್ಕೆ ೧೦ ವರ್ಷ ಕಠಿಣ ಸಜೆ ಹಾಗೂ ರೂ. ೫೦,೦೦೦/- ಸಾವಿರ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಆರ್.ನಾಗರಾಜ್ ವಾದ ಮಂಡಿಸಿದ್ದರು.