ಮೂಡಿಗೆರೆ : ವಿಧಾನಪರಿಷತ್ ಸದಸ್ಯೆ ಮೋಟಮ್ಮನವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾದಾಗ ನಿರ್ಮಿಸಿದ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಇಂದು ಉಪಯೋಗವಿಲ್ಲದಂತಾಗಿದೆ. ಯಾಕಂದ್ರೆ, ಕಡೂರು ಮಂಗಳೂರು ರಾಜ್ಯ ಹೆದ್ದಾರಿ ಪಕ್ಕದಲ್ಲಿರೋ ಈ ಕಚೇರಿ ನೋಡೋಕೆ ವಿಶಾಲ ಹಾಗೂ ವಿಸ್ತಾರವಾಗಿದೆ. ಆದರೆ, ಒಂದೇ ಒಂದು ಕಚೇರಿಗೆ ಇಷ್ಟು ದೊಡ್ಡ ಬಿಲ್ಡಿಂಗ್ ಬೇಕಾ ಅನ್ನೋದು ಮೂಡಿಗೆರೆ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಾಲದಕ್ಕೆ ಮಳೆ ಬಂತೆಂದರೆ ಈ ಬಿಲ್ಡಿಂಗ್ ಸಂಪೂರ್ಣ ಸೋರಲಿದೆ. ಮಳೆ ನೀರು ಕಚೇರಿ ಒಳಗೆ ಬಂದು ಕಚೇರಿ ಗದ್ದೆಯಾದಂತಾಗುತ್ತೆ.
ಮೂಡಿಗೆರೆಯ ತಾಲೂಕು ಪಂಚಾಯಿತಿ ಮುಂಭಾಗದಲ್ಲಿರೋ ಈ ಕಚೇರಿಯ ನಗರದ ಮದ್ಯ ಭಾಗದಲ್ಲಿದೆ. ಕಚೇರಿಯ ನಾಮಫಲಕವೂ ಸರಿಯಾಗಿ ಕಾಣಿಸೋದಿಲ್ಲ. ಇಂತಹಾ ಸುಸರ್ಜಿತ ಕಟ್ಟಡ ಜನರಿಗೆ ಸರಿಯಾಗಿ ಉಪಯೋಗವಾಗದಿರೋದು ಮಾತ್ರ ದುರಂತವೇ ಸರಿ. ಆದ್ದರಿಂದ ಕೂಡಲೇ ಸರ್ಕಾರ ಇತ್ತ ಗಮನ ಹರಿಸಿ ಶಿಶು ಅಭಿವೃದ್ಧಿ ಯೋಜನಾಕಚೇರಿಗೆ ಸರಿಯಾಗಿ ಉಪಯೋಗವಾಗದ ಈ ಕಚೇರಿಯನ್ನ ಸರ್ಕಾರದ ಇತರೇ ಕಚೇರಿಗೆ ವಹಿಸಿ, ಬೇರೆ ಬಿಲ್ಡಿಂಗ್ ನಲ್ಲಿ ಈ ಕಚೇರಿ ನಿರ್ವಹಣೆ ಅನುವು ಮಾಡಿ, ಈ ಕಟ್ಟಡವನ್ನ ಬೇರೆಡೆ ಸ್ಥಳಾಂತರಿಸಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ. ಸಾಲದಕ್ಕೆ ನಗರದ ಹೃದಯ ಭಾಗದಲ್ಲಿರೋ ಇಂತಹಾ ದೊಡ್ಡ ಕಟ್ಟಡ ಹೀಗೆ ನಿರ್ಲಕ್ಷ್ಯಕ್ಕೊಳಗಾಗಿರೋದು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಎಂದು ಜನಪ್ರತಿನಿಧಿಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.