ನಟ ವಿನೋದ್ ರಾಜ್ ಅವರನ್ನು ಯಾಮಾರಿಸಿ ಹಣ ಕದ್ದಿದ್ದ ಆರೋಪಿ ಬಂಧನ…

304
firstsuddi

ಬೆಂಗಳೂರು:  ನಟ ವಿನೋದ್ ರಾಜ್ ಅವರಿಗೆ ಯಾಮಾರಿಸಿ 1 ಲಕ್ಷ ದೋಚಿದ್ದ ಆರೋಪಿಯನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.  ನಟ ವಿನೋದ್ ರಾಜ್ ಅವರು ಒಂದು ತಿಂಗಳ ಹಿಂದೆ ತಮ್ಮ ತೋಟದ ಸಿಬ್ಬಂಧಿಗಳಿಗೆ ಸಂಬಳ ನೀಡಲು ಬ್ಯಾಂಕ್ ನಿಂದ ಒಂದು ಲಕ್ಷ ರೂಪಾಯಿ ಹಣವನ್ನು ಡ್ರಾ ಮಾಡಿಕೊಂಡು ಬಂದು ಕಾರನ್ನು ಸಿಎನ್ ಆರ್ ಬಟ್ಟೆ ಮಳಿಗೆ ಬಳಿ ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಬಂದ ಇಬ್ಬರು ಏನ್ ಸರ್ ಚೆನ್ನಾಗಿದ್ದೀರಾ ಎಂದು ಆತ್ಮೀಯತೆಯಿಂದ ಮಾತನಾಡಿಸಿದ್ದರಂತೆ. ಬಳಿಕ ಕಾರು ಪಂಚರ್ ಆಗಿದೆ ಎಂದು ಹೇಳಿ ರಿಪೇರಿ ಮಾಡುವ ನೆಪದಲ್ಲಿ ಕಾರಿನೊಳಗೆ ಇದ್ದ ಒಂದು ಲಕ್ಷ ರೂಪಾಯಿ ಹಣವನ್ನು ಕದ್ದು ಪರಾರಿಯಾಗಿದ್ದಾರೆಂದು ವಿನೋದ್ ರಾಜ್ ಅವರು ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನೆಲಮಂಗಲ ಪೊಲೀಸರು ಹಣ ದೋಚಿದ್ದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಓಜಿಕುಪ್ಪಂ ಮೂಲದ ರಾಜು ಅಲಿಯಾಸ್ ಹೈಟೆಕ್ ರಾಜ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಗ್ಯಾಂಗ್ ನ ಇತರ ಸದಸ್ಯರನ್ನು ಬಂಧಿಸಿಲು ಪೊಲೀಸರು ಬಲೆ ಬೀಸಿದ್ದಾರೆ.