ಪರಿಸರವಾದಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಊರುಬಗೆ,ಬೈರಾಪುರ ಗ್ರಾಮಸ್ಥರು…

672

ಮೂಡಿಗೆರೆ- ಭಾರತ್ ಮಾಲ ಪರಿಯೋಜನಾ ಯೋಜನೆಯಡಿಯಲ್ಲಿ ನೆಲ್ಯಾಡಿ – ಚಿತ್ರದುರ್ಗ ಛತ್ರಪದ ರಸ್ತೆಯ ಜನಾಭಿಪ್ರಾಯ ಸಂಗ್ರಾಹ ಸಭೆಯಲ್ಲಿ, ಕೆಲವು ಪರಿಸರವಾದಿಗಳು ಪರ್ಯಾಯ ರಸ್ತೆಗಳು ಇರುವುದರಿಂದ ಅದನ್ನೆ ಅಭಿವೃದ್ದಿ ಮಾಡಿ ಬೈರಾಪುರ,ಶಿಶಿಲ ರಸ್ತೆ ಮಾಡುವುದು ಬೇಡ ಎಂದು ಹೇಳಿದ್ದಕ್ಕೆ ಊರುಬಗೆ,ಬೈರಾಪುರ ಹಾಗೂ ಶಿಶಿಲ ಗ್ರಾಮದ ನೂರಾರು ರೈತರು ಬಂದಿದ್ದ ಮೂರು ಜನ ಪರಿಸರವಾದಿಗಳಿಗೆ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ಮೂಡಿಗೆರೆ ಸರ್ಕಲ್ ಇನ್ ಸ್ಪೆಕ್ಟರ್ ಜಗದೀಶ್ ಮದ್ಯ ಪ್ರವೇಶಿಸಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿದರು.