ಮೈಸೂರು: ಪತ್ನಿ ತನ್ನ ಪತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ಉದಯಗಿರಿಯ ಸತ್ಯ ನಗರಲ್ಲಿ ನಡೆದಿದೆ. ಮಹಜರ್ ಪಾಷಾ(45) ಗಂಭೀರವಾಗಿ ಗಾಯಗೊಂಡಿರುವ ಪತಿ. ಕಳೆದ 23 ವರ್ಷಗಳ ಹಿಂದೆ ಮಮ್ತಾಜ್ ಹಾಗೂ ಮಹಜರ್ ಪಾಷಾ ವಿವಾಹವಾಗಿದ್ದು, ಇವರಿಗೆ 6 ಮಕ್ಕಳಿದ್ದಾರೆ ಎಂದು ತಿಳಿದು ಬಂದಿದ್ದು, ನಿನ್ನೆ ರಾತ್ರಿ ಮಲಗಿದ್ದ ವೇಳೆ ಪತ್ನಿ ಮಮ್ತಾಜ್ ತನ್ನ ಪತಿ ಮಹಜರ್ ಪಾಷಾ ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಇದರಿಂದ ಮಹಜರ್ ಪಾಷಾ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೆ .ಆರ್. ಆಸ್ಪತ್ರೆ ಗೆ ದಾಖಲಿಸಲಾಗಿದೆ. ಮಮ್ತಾಜ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










