ಮೂಡಿಗೆರೆ: 2 ಸಾವಿರ ವರ್ಷದ ಹಿಂದಿನ ತುಳು ಬಾಷೆ ಪ್ರಪಂಚದ ವಿವಿಧ ಭಾಷೆಗಳಲ್ಲಿ ಒಂದಾಗಿದೆ ಮತ್ತು ತನ್ನದೆ ಆದ ಸ್ಥಾನ ಮಾನ ಹೊಂದಿದ್ದು ತುಳು ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಕಾಫಿನಾಡು ತವರೂರೆಂದು ಪ್ರಸಿದ್ಧಿಯಾಗಿರುವ ಮೂಡಿಗೆರೆ ತಾಲೂಕು ಯಶಸ್ವಿಯಾಗಿದೆ ಎನ್ನುವುದಕ್ಕೆ ಮೂಡಿಗೆರೆ ತುಳುಕೂಟದ ದಶಮಾನೋತ್ಸವ ಸಾಕ್ಷಿಯಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ ತಿಳಿಸಿದರು.
ಅವರು ಪಟ್ಟಣದ ಅಡ್ಯಂತಾಯ ರಂಗಮಂದಿರದ ವೀರ ರಾಣಿ ಅಬ್ಬಕ್ಕ ಚಾವಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುಕೂಟ ಸಂಯುಕ್ತಾಶ್ರಯದಲ್ಲಿ ಚಿಕ್ಕಮಗಳೂರು ಜಿಲ್ಲಾ ತುಳು ಸಾಹಿತ್ಯ ಸಮ್ಮೆಳನ ಮತ್ತು ಮೂಡಿಗೆರೆ ತುಳುಕೂಟದ ದಶಮಾನೋತ್ಸವ ಆಚರಣೆಯನ್ನು ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ ಅವರು ತುಳು ಭಾಷೆಯ ಆಚಾರ ವಿಚಾರದ ಬಗ್ಗೆ ತುಳು ಭಾಷೆಗೆ ಸರ್ಕಾರದಿಂದ ಸರ್ವ ರೀತಿಯ ಮಾನ್ಯತೆ ಸಿಕ್ಕುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ನಮ್ಮ ಭಾಷೆಯ ಕಾರ್ಯಕ್ರಮ ಮಾಡುವುದರೊಂದಿಗೆ ಬೇರೆ ಭಾಷೆಯನ್ನು ತುಳುವಿನಲ್ಲಿ ಅನುವಾದಗೊಳಿಸಿದಲ್ಲಿ ನಮ್ಮ ಭಾಷೆಯು ಶಕ್ತಿಯುತವಾಗುತ್ತದೆ ಎಂದರು. ದಕ್ಷಿಣ ಕನ್ನಡದಲ್ಲಿ ಎಸ್‍ಎಸ್‍ಎಲ್‍ಸಿ, ಬಿಎ, ಎಂಎ,ಯಲ್ಲಿ ತುಳು ಭಾಷೆಯನ್ನು ಅಳವಡಿಸಲಾಗಿದೆ ಮುಂದೊಂದು ದಿನ ಹೈಸ್ಕೂಲ್ ಮಟ್ಟದಲ್ಲೂ ತುಳುಭಾಷೆ ಪಾಠ್ಯಕ್ರಮ ಅಳವಡಿಸುವ ಸಾಧ್ಯತೆಯಿದೆ ಎಂದರು.
ನಮ್ಮ ಗ್ರಾಮೀಣ ಪ್ರದೇಶದಲ್ಲಿ ತುಳು ಭಾಷೆ ಆಚಾರ ವಿಚಾರಗಳು ನಿರಂತರವಾಗಿದ್ದು, ಬೂತಾರಾಧನೆ, ದೈವರಾಧನೆ, ಕೋಲ, ತುಳು ಬಾಷಿತ ಸಿನಿಮಾಗಳು, ನಾಟಕಗಳು ಯಕ್ಷಗಾನಗಳು ಇಂದಿಗೂ ಜೀವಂತವಾಗಿದ್ದು ವಿಶ್ವ ಸಂಸ್ಥೆಯ ವರದಿಯಂತೆ ಭಾಷೆ ನಾಶವಾಗುತ್ತಿದೆ ಎಂದು ಅಡಕವಿತ್ತು, ಆದರೆ ನಮ್ಮ ಭಾಷೆ ಇಂದಿಗೂ ನಾಶವಾಗಿಲ್ಲ. ಇಂಗ್ಲೀಷ್ ಭಾಷೇ ನಮಗೆ ಬೇಕು ಆದರೆ ಅದರ ಸಂಸ್ಕøತಿ ನಮಗೆ ಬೇಡ. ನಮ್ಮ ಮಾತೃಭಾಷೆಯಲ್ಲಿ ಅಪ್ಪೆ , ಅಮೆ, ಅಜ್ಜಿ, ಬಿನ್ನೆರು ಎಂದು ಗೌರವದಲ್ಲಿ ಕರೆಯುತ್ತೇವೆ ಅದನ್ನು ಬಿಟ್ಟು ನಾವು ಆಂಗ್ಲಭಾಷೆಗೆ ಮಾರುಹೋಗಿ ಆಂಟಿ,ಅಂಕಲ್, ಮಮ್ಮಿ, ಡ್ಯಾಡಿ ಸಂಸ್ಕøತಿಯಿಂದ ಬದುಕುತ್ತಾ ಬಂದಿರುವುದು ಬೇಸರದ ಸಂಗತಿಯಾಗಿದೆ. ಇಂದಿನ ಯುವ ಪೀಳಿಗೆ ತುಳುಸಂಸ್ಕøತಿಯನ್ನು ಉಳಿಸಿ ಬೆಳೆಸುವಲ್ಲಿ ಮುಂದು ಬರಬೇಕು ಆದರೆ ಬೇರೆ ಬೇರೆ ಭಾಷೆಯನ್ನು ಗೌರವಿಸಿ ಪ್ರೀತಿಸಿ ಆದರೆ ತುಳು ಬಾಷೆಯನ್ನು ಮರೆಯದಿರಿ ಎಂದರು.
ತಾ.ಪಂ.ಅಧ್ಯಕ್ಷ ಕೆ.ಸಿ.ರತನ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಮೂಡಿಗೆರೆಯಲ್ಲಿ ತುಳು ಒಕ್ಕೂಟ ಕಳೆದ ಹತ್ತು ವರ್ಷಗಳಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ತುಳು ನಾಡಿನ ಕಂಪನ್ನು ಮಲೆನಾಡಿನಲ್ಲಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತುಳು ನಾಡಿನ ವಿಶೇಷವಾದ ಕಂಬಳವನ್ನು ಮೂಡಿಗೆರೆಯಲ್ಲಿ ಪ್ರದರ್ಶಿಸಲು ಪ್ರಯತ್ನಗಳು ನಡೆಯಿತು ಆದರೆ ಕಾನೂನು ತೊಡಕಿನಿಂದ ಕಂಬಳವನ್ನು ನಡೆಸಲು ಮೂಡಿಗೆರೆಯಲ್ಲಿ ನಡೆಸಲು ಅಸಾದ್ಯವಾಯಿತು. ತುಳು ಬಾಂಧವರು ಉತ್ತಮ ಸಂಸ್ಕøತಿ, ದೇಶ ಭಕ್ತಿ ಹೊಂದಿದ್ದಾರೆ. ತುಳು ಸಂಸ್ಕøತಿ ಮತ್ತು ಸಂಪ್ರಾದಾಯವನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ತುಳು ಭಾಷೆ ಮತ್ತು ಸಾಹಿತ್ಯಕ್ಕೆ ಮತ್ತು ಸಂಸ್ಕøತಿಗೆ ಪ್ರತಿಯೊಬ್ಬರು ಕೈಜೋಡಿಸುವಂತೆ ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಎಂ.ಎ.ಶೇಷಗಿರಿ, ಎಂ.ಆರ್.ಜಗದೀಶ್, ಎಂ.ಜೆ.ದಿನೇಶ್, ಎ.ಸಿ.ಆಯ್ಯೂಬ್, ಕುಮಾರಿ ರಕ್ಷಿತ ರಾಜ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ವೇದಿಕೆಯ ಅಧ್ಯಕ್ಷತೆಯನ್ನು ತುಳುಕೂಟದ ಅಧ್ಯಕ್ಷ ಅಶೋಕ್ ಎನ್.ಶೆಟ್ಟಿ ವಹಿಸಿದ್ದರು, ಶಾಸಕ ಎಂ.ಪಿ.ಕುಮಾರಸ್ವಾಮಿ, ಮಾಜಿ ಸಚಿವೆ ಡಾ/ಮೋಟಮ್ಮ, ಪ.ಪಂಅಧ್ಯಕ್ಷೆ ರಮೀಜಾಬಿ, ಜಿ.ಪಂ.ಸದಸ್ಯರುಗಳಾದ ಶ್ರೀಮತಿ ಸುಧಾಯೋಗೇಶ್,ಶ್ರೀಮತಿ ಅಮಿತ ಮುತ್ತಪ್ಪ, ಅಖಿಲ ಭಾರತ ತುಳು ಒಕ್ಕೂಟದ ಕಾರ್ಯದರ್ಶಿ ಶಶಿಧರ್ ನಿಟ್ಟೆ, ಸಂತ ಅಂತೋಣಿ ಚರ್ಚ್ ಧರ್ಮಗುರು ಪೌಲ್ ಮಚಾದೊ, ರವಿಕುಮಾರ್, ಡಿ.ಬಿ.ನರೇಂದ್ರ ಶೆಟ್ಟಿ, ಸುಂದರ್ ಬಿಳಗುಳ, ರಮೇಶ್ ಆಚಾರ್ಯ, ಸಂಘಟನಾ ಕಾರ್ಯಧರ್ಶಿ ಅಬ್ಬಾಸ್ ಕಿರುಗುಂದ, ತುಳು ಚಿತ್ರದ ನಿರ್ದೇಶಕ ನವೀನ್ ಡಿ.ಪಡೀಲ್, ಕಿರು ತೆರೆ ಮತ್ತು ಸಿನಿಮಾ ನಟ ಉಮೇಶ್ ಮೀಜಾರ್ ಉಪಸ್ಥಿತರಿದ್ದರು.










