ಕಳಸವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡುವಂತೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಿಎಂ ಭೇಟಿ

608

ಕಳಸ: ಕಳಸವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡುವಂತೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕುಮಾರ್ ಹಾಗೂ ತಾಲ್ಲೂಕು ಅಧ್ಯಕ್ಷ ರಾಘವೇಂದ್ರ ಕೆಸವಳಲು, ಕಳಸ ವಿಜಯವಾಣಿ ಪತ್ರಿಕೆ ವರದಿಗಾರ ಸುದೀಶ್ ಸುವರ್ಣ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೇಟಿಯಾಗಿ  ಒತ್ತಾಯಿಸಿದ್ದಾರೆ.

ಮಾದ್ಯಮ ಅಕಾಡೇಮಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಿಂದ ಬೆಂಗಳೂರಿನ ಲಲಿತ್ ಅಶೋಕ್ ಹೊಟೇಲಿನಲ್ಲಿ ನಡೆದ ಮಾದ್ಯಮ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳನ್ನು ಬೇಟಿಯಾಗಿ ತಾಲ್ಲೂಕು ಕೇಂದ್ರವನ್ನು ಮಾಡುವ ಕುರಿತು ಪ್ರಸ್ತಾಪಿಸಿದ್ದಾರೆ.ಕಳಸವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಲು ಅದಕ್ಕೆ ಬೇಕಾದ ಪೂರಕ ಅಂಕಿ ಅಂಶಗಳನ್ನು ನೀಡಿ ಮನವಿಯನ್ನು ಸಲ್ಲಿಸಲಾಗಿದೆ.

ಈ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಕಳಸ ತಾಲ್ಲೂಕು ಕೇಂದ್ರವನ್ನು ಮಾಡುವ ಬಗ್ಗೆ ನನ್ನ ಗಮನದಲ್ಲಿದೆ.ಇದರ ಬಗ್ಗೆ ಈಗಾಗಲೇ ಜಿಲ್ಲಾಡಳಿತದಿಂದ ವರದಿಯನ್ನು ಕೇಳಿದ್ದೇನೆ.ಆ ವರದಿಯು ಕೂಡ ತಲುಪಿದೆ.ಇದು ಪರಿಶೀಲನೆಯ ಹಂತದಲ್ಲಿದೆ ಸದ್ಯದಲ್ಲಿಯೇ ಈ ಬಗ್ಗೆ ಸ್ಪಷ್ಟ ನಿರ್ದಾರವನ್ನು ಕೂಡ ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here