ಅಂಗನವಾಡಿ ಮುಂಭಾಗದ ಚರಂಡಿ ಬಳಿ ನವಜಾತ ಶಿಶು ಮೃತದೇಹ ಪತ್ತೆ…

115
firstsuddi

ಕೊಳ್ಳೇಗಾಲ : ಪಟ್ಟಣದ ಕಾವೇರಿ ರಸ್ತೆಯ ನಾಯಕರ ಬೀದಿಯ ಅಂಗನವಾಡಿ ಮುಂಭಾಗದ ಚರಂಡಿ ಬಳಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಚೀಲದೊಳಗೆ ಹಾಕಿ ಹೋಗಿದ್ದು, ಸುಮಾರು ಒಂದು ದಿನದ ಮಗು ಇದಾಗಿದೆ ಎಂದು ತಿಳಿದುಬಂದಿದೆ.

ಸ್ಥಳೀಯರು ಮೂಟೆ ತೆರೆದು ನೋಡಿದಾಗ ಶಿಶು ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪಟ್ಟಣ ಠಾಣೆಯ ಪೊಲೀಸರು ಮಹಜರ್ ನಡೆಸಿ ಶವವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.