ಅತಿಥಿ ಉಪನ್ಯಾಸಕರ ವೇತನ 11 ಸಾವಿರದಿಂದ 28 ಸಾವಿರಕ್ಕೆ ಹೆಚ್ಚಳ…

81
firstsuddi

ಬೆಂಗಳೂರು : ಸಂಕ್ರಾತಿ ಹಬ್ಬದಂದು ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ ನೀಡಿದೆ. ವೇತನದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಅವರು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರು ಅನೇಕ ಬೇಡಿಕೆ ಇಟ್ಟಿದ್ದರು. ಅವರ ಬೇಡಿಕೆ ಬಗ್ಗೆ ವರದಿ ನೀಡಲು ಸಿಎಂ ಸಮಿತಿ ನೇಮಕ ಮಾಡಿದ್ರು. ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ವರದಿಯನ್ನು ಗಮನಿಸಿದ ಸಿಎಂ ಅದನ್ನು ಅನುಷ್ಠಾನ ಮಾಡಲು ಒಪ್ಪಿದ್ದಾರೆ ಎಂದರು.

ಈ ಮುನ್ನ ಪ್ರತಿ ತಿಂಗಳಿಗೆ 11 ಸಾವಿರ ರೂ. ಸಂಬಳ ಪಡೆಯುತ್ತಿದ್ದವರಿಗೆ 28 ಸಾವಿರ ಹಾಗೂ 13 ಸಾವಿರ ಇದ್ದವರಿಗೆ 32 ಸಾವಿರ ರೂ. ನೀಡಲಾಗುವುದು. ಯುಜಿಸಿ (ಯುಜಿಸಿ) ಅರ್ಹತೆ ಇರುವವರಿಗೆ, 5 ವರ್ಷ ಸೇವೆ ಸಲ್ಲಿಸಿದವರಿಗೆ 32 ಸಾವಿರ ನೀಡಲಾಗುತ್ತದೆ. ವರ್ಷದಲ್ಲಿ 10 ತಿಂಗಳು ಅತಿಥಿ ಉಪನ್ಯಾಸಕರಿಗೆ ಕೆಲಸ ಇರುತ್ತೆ. ಫುಲ್ ವರ್ಕ್ ಲೋಡ್ ಕೊಡ್ತೀವಿ ಎಂದರು.