ಮೈಸೂರು : ಹಿಜಬ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಡಿ. ಸಿದ್ದರಾಮಯ್ಯ ಅವರನ್ನು ಚಾಮರಾಜ ಪೇಟೆಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಗೋರಿಪಾಳ್ಯದ ಜಮೀರ್ ಅಹಮದ್ ಕರೆಯುತ್ತಿದ್ದಾರೆ. ಅಧಿಕಾರಕ್ಕಾಗಿ ಸಿದ್ದರಾಮಯ್ಯ ಅವರು ಸಿದ್ದರಹೀಮ್ ಅಯ್ಯ ಎಂದು ಬೇಕಾದರೂ ಹೆಸರು ಬದಲಾಯಿಸಿಕೊಳ್ಳುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ರೀತಿಯ ಒತ್ತಡ, ಟೀಕಾಪ್ರಹಾರದ ನಡುವೆಯೂ ಸಮವಸ್ತ್ರ ಕಡ್ಡಾಯಕ್ಕೆ ಸರ್ಕಾರ ಬದ್ಧವಾಗಿರೋದು ಒಳ್ಳೆಯ ಸಂದೇಶ. ಸಮವಸ್ತ್ರ ಎನ್ನುವುದು ಬರೀ ಬಣ್ಣದ ಉಡುಪಲ್ಲ. ಅದು ಎಲ್ಲಾ ಮಕ್ಕಳು ಸಮಾನರು ಎಂದು ಸಾರುವ ಉಡುಪಾಗಿದೆ. ಆದರೆ ಹಿಜಬ್ ಗಾಗಿ ಇಷ್ಟು ಹಠ ಹಿಡಿದು ಯಾಕಾಗಿ ವಿದ್ಯಾರ್ಥಿಗಳು ಕೂತಿದ್ದಾರೆ. ಹಿಜಾಬ್ ಹಾಕಿಕೊಂಡು, ಟೋಪಿ ಹಾಕಿಕೊಂಡು ನೀವು ಕಲಿಯಬೇಕು ಎಂಬುದಾದರೆ ಮದರಾಸಗೆ ಹೋಗಿ. ಮದರಸದಲ್ಲಿ ನಿಮ್ಮ ಪ್ರತ್ಯೇಕ ಭಾವನೆ ಕಾಪಾಡಿ ಕೊಳ್ಳಬಹುದು ಎಂದರು.
ಇದು ಬ್ರಿಟಿಷರ ಭಾರತವಲ್ಲ. ಹಿಂದೂ ಧರ್ಮದ ಬುನಾದಿ ಮೇಲೆ ಇರುವ ದೇಶವಿದು. ಇಲ್ಲಿ ಗಣಪತಿ ಪೂಜೆ, ಹೆಣ್ಣು ಮಕ್ಕಳ ಕುಂಕುಮ ಸಂಸ್ಕೃತಿಯ ಭಾಗ. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಇಸ್ಲಾಂ, ಕ್ರಿಶ್ಚಿಯನ್ನರು ಮರುಭೂಮಿಯಲ್ಲಿ ಹುಟ್ಟಿ ನೆಲೆಗಾಗಿ ಹುಡುಕಿಕೊಂಡು ಇಲ್ಲಿಗೆ ಬಂದಿದ್ದಾರೆ. ಇಲ್ಲಿಗೆ ಬಂದ ಮೇಲೆ ಹಿಂದೂ ಸಂಸ್ಕೃತಿಯನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು.










