ಅಪಹರಣವಾಗಿದ್ದ ಭಾರತ ಮೂಲದ ನಾಲ್ವರು ಶವವಾಗಿ ಪತ್ತೆ…

56
firstsuddi

ವಾಷಿಂಗ್ಟನ್ : ಕ್ಯಾಲಿಫೋರ್ನಿಯಾದಲ್ಲಿ ಕೆಲ ದಿನಗಳ ಹಿಂದೆ ಅಪಹರಣವಾಗಿದ್ದ ಭಾರತ ಮೂಲದ ಒಂದೇ ಕುಟುಂಬದ ನಾಲ್ವರು ಹಣ್ಣಿನ ತೋಟವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

8 ತಿಂಗಳ ಮಗು ಅರೂಹಿ ಧೇರಿ ಮತ್ತು ಪೋಷಕರಾದ ಜಸ್ಲೀನ್ ಕೌರ್ (27), ಜಸ್ದೀಪ್ ಸಿಂಗ್ (36) ಹಾಗೂ ಚಿಕ್ಕಪ್ಪ ಅಮನದೀಪ್ ಸಿಂಗ್ (39) ಅವರನ್ನು ಅಪಹರಿಸಲಾಗಿತ್ತು. ನಾಲ್ವರ ಶವಗಳು ಇಂಡಿಯಾನಾ ರಸ್ತೆ ಮತ್ತು ಹಚಿನ್ಸನ್ ರಸ್ತೆ ಬಳಿಯ ಹಣ್ಣಿನ ತೋಟದಲ್ಲಿ ನಿನ್ನೆ ಸಂಜೆ ಪತ್ತೆಯಾಗಿವೆ. ತೋಟದ ರೈತ ಶವಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುಟುಂಬವನ್ನು ಅಪಹರಿಸಿದ ಒಂದು ದಿನದ ನಂತರ, ಪೊಲೀಸರು ಶಂಕಿತ ಅಪಹರಣಕಾರನನ್ನು ಪತ್ತೆ ಮಾಡಿ, 48 ವರ್ಷದ ಜೀಸಸ್ ಮ್ಯಾನುಯೆಲ್ ಸಲ್ಗಾಡೊನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ವಿಚಾರಣೆ ವೇಳೆ ಜಸ್ದೀಪ್ ಸಿಂಗ್ ಕುಟುಂಬದ ಮೇಲೆ ಈ ವ್ಯಕ್ತಿಗೆ ದ್ವೇಷವಿದೆ ಎಂದು ಹೇಳಲಾಗಿದೆ.