“ಅಲ್ಲಾಡ್ಸು ಅಲ್ಲಾಡ್ಸು” ಹಾಡಿಗೆ ಶಿಕ್ಷಕಿಯರ ಭರ್ಜರಿ ಸ್ಟೆಪ್ಸ್-ಶಿಕ್ಷಣ ಸಚಿವರಿಂದ ನೊಟೀಸ್ ಜಾರಿ…

1218
firstsuddi

ಬೆಂಗಳೂರು : ಸರ್ಕಾರಿ ಶಾಲೆಯ ಶಿಕ್ಷಕಿಯರು ಬಾಟಲಿಯನ್ನು ಹಿಡಿದು ಅಲ್ಲಾಡ್ಸು ಅಲ್ಲಾಡ್ಸು ಹಾಡಿಗೆ ಡ್ಯಾನ್ಸ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸದ್ಯ ಶಿಕ್ಷಕಿಯರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ನೊಟೀಸ್ ನೀಡಿದ್ದಾರೆ. ಬೆಂಗಳೂರಿನ ಹನುಮಂತನಗರದ ರಾಮಾಂಜನೇಯ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕಿಯರು ಶಾಲಾ ಕಾರ್ಯಕ್ರಮದಲ್ಲಿ “ಅಲ್ಲಾಡ್ಸು ಅಲ್ಲಾಡ್ಸು” ಎಂಬ ಸಿನಿಮಾ ಹಾಡಿಗೆ ಕೈಯಲ್ಲಿ ನೀರಿನ ಬಾಟಲಿ ಹಿಡಿದು ಭರ್ಜರಿ ಸ್ಟೆಪ್ಸ್ ಹಾಕಿದ್ದು, ಈಗಾ ವಿವಾದ ಸೃಷ್ಠಿಯಾಗಿದೆ. ಶಿಕ್ಷಕಿಯರ ಈ ವೀಡಿಯೋವನ್ನು ನೋಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಈ ರೀತಿಯ ಹಾಡಿಗೆ ಶಾಲಾ ಶಿಕ್ಷಕರು ಡ್ಯಾನ್ಸ್ ಮಾಡುವುದು ಸರಿಯಲ್ಲ ಎಂದು ಶಾಲೆಗೆ ನೊಟೀಸ್ ನೀಡಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.