ಅಬುದಾಭಿ : ನಿನ್ನೆ ನಡೆದ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ 2ನೇ ಕ್ವಾಲಿಫಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 17 ರನ್ ಗಳಿಂದ ಜಯಗಳಿಸುವ ಮೂಲಕ ಇದೇ ಮೊದಲ ಬಾರಿಗೆ ಫೈನಲ್ಸ್ ಗೆ ಪ್ರವೇಶಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಶಿಖರ್ ಧವನ್-78, ಶ್ರಿಮಾನ್ ಹೆಟ್ಮಯರ್-43, ಶ್ರೇಯಸ್ ಅಯ್ಯರ್-21, ಸ್ಟೊಯಿನಿಸ್-38 ರನ್ ಬಾರಿಸುವ ಮೂಲಕ 20 ಓವರ್ ಗೆ 3 ವಿಕೆಟ್ ಕಲೆದುಕೊಂಡು 189 ರನ್ ಕಲೆ ಹಾಕಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡದ ಪರವಾಗಿ ಕೇನ್ ವಿಲಿಯಮ್ಸನ್-67, ಗಾರ್ಗ್-17, ಮನೀಶ್ ಪಾಂಡೆ-21, ಅಬ್ದುಲ್ ಸಮದ್-33 ರನ್ ಬಾರಿಸುವ ಮೂಲಕ 20 ಓವರ್ ಗೆ 8 ವಿಕೆಟ್ ಕಳೆದುಕೊಂಡು 172 ರನ್ ಗಳಿಸಲಷ್ಟೆ ಶಕ್ತವಾಯಿತು.
ಈ ಪಂದ್ಯದ ಮೂಲಕ ಇದೇ ಮೊದಲ ಬಾರಿಗೆ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್ಸ್ ಪ್ರವೇಶಿಸಿದ್ದು, ನಾಳೆ ಫೈನಲ್ಸ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಡಲಿದೆ.










