ಕಾಮನ್ ವೆಲ್ತ್ ನಲ್ಲಿ ಅವಳಿ ಚಿನ್ನದ ಪದಕ ಗೆದ್ದ ಕನ್ನಡಿಗ ಋತ್ವಿಕ್…

292
firstsuddi

ಮಂಗಳೂರು: ಕೆನಡಾದ ಸೈಂಟ್ ಜಾನ್ಸ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಅಂತಾರಾಷ್ಟ್ರೀಯ ಬೆಂಚ್ ಪ್ರೆಸ್ ಪವರ್ ಲಿಫ್ಟ್ ಚಾಂಪಿಯನ್ ಶಿಪ್ 83 ಕಿಲೋ ಸಬ್ ಜೂನಿಯರ್ ವಿಭಾಗದಲ್ಲಿ ಭಾರತ ಪ್ರತಿನಿಧಿಸಿರುವ ಋತ್ವಿಕ್ ಅಲೆವೂರಾಯ ಕೆ.ವಿ. ಎರಡು ಚಿನ್ನದ ಪದಕ ಪಡೆದಿದ್ದಾರೆ. ಕ್ಲಾಸಿಕ್ ಹಾಗೂ ಎಕ್ವಿಡ್ ವಿಭಾಗದಲ್ಲಿ ಭಾರ ಎತ್ತಿ ಪ್ರಶಸ್ತಿಯನ್ನು ಪಡೆಯುವ ಮೂಲಕ ನಮ್ಮ ದೇಶ ಹಾಗು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಋತ್ವಿಕ್, ವಾಸುದೇವ ಭಟ್ ಹಾಗೂ ದೀಪಾ ದಂಪತಿ ಪುತ್ರ. ಇವರು ಪ್ರದೀಪ್ ಆಚಾರ್ಯ ಅವರಿಂದ ತರಬೇತಿ ಪಡೆಯುತ್ತಿದ್ದು, ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.