ಕೇಂದ್ರ ಬಜೆಟ್ 2022 – ಆರ್ಥಿಕ ಸಮೀಕ್ಷೆ ಮಂಡಿಸಿದ ಹಣಕಾಸು ಸಚಿವೆ.

92
firstsuddi

ನವದೆಹಲಿ : ಸಂಸತ್ತಿನಲ್ಲಿ ಇಂದಿನಿಂದ ಆರಂಭವಾದ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ರ ಆರ್ಥಿಕ ಸಮೀಕ್ಷಾ ವರದಿಯನ್ನು ಮಂಡಿಸಿದರು.

2022-2023ರ ಆರ್ಥಿಕ ವರ್ಷದಲ್ಲಿ ಆಶಾದಾಯಕ ಬೆಳವಣಿಗೆ ದಾಖಲಿಸಬಹುದು ಎಂದು ಆರ್ಥಿಕ ಸಮೀಕ್ಷೆಯ ವರದಿಯು ಉಲ್ಲೇಖಿಸಿದೆ. 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ (ಏಪ್ರಿಲ್ 2022 ರಿಂದ ಮಾರ್ಚ್ 2023ರವರೆಗೆ) ಶೇ.8 ರಿಂದ 8.5 ರಷ್ಟು ಬೆಳವಣಿಗೆಯ ದರ ಅಂದಾಜಿಸಲಾಗಿದ್ದು, ಒಟ್ಟು ದೇಶೀಯ ಉತ್ಪನ್ನ-ಜಿಡಿಪಿ ಶೇ.9.2ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಆರ್ಥಿಕ ಸಮೀಕ್ಷೆ 2021-22ರ ಸಮೀಕ್ಷೆಯಲ್ಲಿ ಆರ್ಥಿಕತೆಯ ವಿವಿಧ ವಲಯಗಳ ಸ್ಥಿತಿ ಮತ್ತು ಬೆಳವಣಿಗೆಯನ್ನು ವೇಗಗೊಳಿಸಲು ಕೈಗೊಳ್ಳಬೇಕಾದ ಸುಧಾರಣೆಗಳನ್ನು ವಿವರಿಸಲಾಗಿದೆ. ಆರ್ಥಿಕ ಸಮೀಕ್ಷಾ ವರದಿ ಮಂಡನೆ ಬಳಿಕ ಲೋಕಸಭೆ ಕಲಾಪವನ್ನು ನಾಳೆಗೆ 11 ಗಂಟೆಗೆ ಮುಂದೂಡಲಾಗಿದೆ.